ETV Bharat / state

ACB raid: ಡ್ರೈನೇಜ್ ಪೈಪ್‌ನಲ್ಲಿ ಹಣ ಅಡಗಿಸಿಟ್ಟಿದ್ದ JE ಶಾಂತಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆ ಜೈಲು ವಾರ್ಡ್​ಗೆ ಶಿಫ್ಟ್ - junior engineer handed over for-judicial custody

ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಎಸಿಬಿಯಿಂದ ಬಂಧನಕ್ಕೊಳಗಾಗಿರುವ ಜೇವರ್ಗಿ ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರ ಅವರ ಅರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.

acb raid
ಡ್ರೈನೇಜ್ ಪೈಪ್‌ನಲ್ಲಿ ಹಣ ಪತ್ತೆ
author img

By

Published : Nov 25, 2021, 10:54 AM IST

Updated : Nov 25, 2021, 12:43 PM IST

ಕಲಬುರಗಿ: ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಜೇವರ್ಗಿ ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.

ACB Raid
ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಶಾಂತಗೌಡ ಬಿರಾದಾರ ಅವರ ಗುಬ್ಬಿ ಕಾಲೋನಿಯ ಮನೆ, ತೋಟದ ಮನೆ, ಜೇವರ್ಗಿಯಲ್ಲಿನ ಕಚೇರಿ ಮೇಲೆ ಏಕಕಾಲಕ್ಕೆ‌ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ರಾತ್ರಿ 8 ಗಂಟೆವರೆಗೂ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ, ಡ್ರೈನೇಜ್ ಪೈಪ್‌ನಲ್ಲೂ ಕೂಡ ಹಣದ ಕಂತೆ, ವಾಲ್ ಸೀಲಿಂಗ್​ನಲ್ಲಿ ಬಚ್ಚಿಟ್ಟಿದ್ದ ಹಣದ ಕಂತೆ ಸೇರಿ 54 ಲಕ್ಷ ರೂ. ನಗದು ಒಳಗೊಂಡಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು‌.

ಇದನ್ನೂ ಓದಿ: Kalaburagi ACB Raid: ಡ್ರೈನೇಜ್​ ಪೈಪಲ್ಲಿ ಹರಿದು ಬಂತು ಹಣ.. ಪಿಡಬ್ಲ್ಯೂಡಿ ಜೆಇ ಪ್ಲಾನ್​ಗೆ ಎಸಿಬಿ ಅಧಿಕಾರಿಗಳೇ ದಂಗು

ಹೆಚ್ಚಿನ ತನಿಖೆಗೆ ಸಹಕಾರ ನೀಡದ ಕಾರಣ ನಿನ್ನೆ ರಾತ್ರಿ ಶಾಂತಗೌಡ ಅವರನ್ನು ಬಂಧಿಸಿದ ಎಸಿಬಿ ಅಧಿಕಾರಿಗಳು ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಆದರೆ ಜೈಲಿಗೆ ಹೋಗುತ್ತಿದ್ದಂತೆ ಶಾಂತಗೌಡ ಬಿರಾದರ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಭಯದಿಂದ ಗಾಬರಿಗೊಂಡ ಹಿನ್ನೆಲೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್​ಗೆ ಅವರನ್ನು ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಂತಗೌಡಗೆ ಸಂಬಂಧಿಸಿದ ಬ್ಯಾಂಕ್ ಲಾಕರ್ ಕುರಿತಂತೆ ಅಧಿಕಾರಿಗಳು ಕಲಬುರಗಿ ಹಾಗೂ ಜೇವರ್ಗಿ ಎಸ್​ಬಿಐ ಬ್ಯಾಂಕ್​ಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬಳಿ ರಸ್ತೆ ಅಪಘಾತ.. 3 ದಿನದ ಹಿಂದೆ ಮದುವೆ, ವರ ಸಾವು, ವಧು ಸ್ಥಿತಿ ಗಂಭೀರ!

Last Updated : Nov 25, 2021, 12:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.