ಯಾದಗಿರಿ: ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದ ರೈತರು ನೂಕುನುಗ್ಗಲು ಮಾಡಿದ್ದಾರೆ. ಈ ವೇಳೆ ರೈತನಿಗೆ ಪೊಲೀಸ್ ಅಧಿಕಾರಿಯೋರ್ವ ಕಪಾಳಮೋಕ್ಷ ಮಾಡಿರುವ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ.
ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ಬೆಳಗ್ಗೆಯಿಂದ ರೈತ ಸಂಪರ್ಕ ಕೇಂದ್ರ ಬಳಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ರೈತರು ಜಮಾಯಿಸಿದ್ದರು. ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗದಿದ್ದಕ್ಕೆ ಸಾಲುಗಟ್ಟಿ ನಿಂತಿದ್ದ ರೈತರ ನಡುವೆ ನೂಕುನುಗ್ಗಲಾಗಿದೆ.
ರೈತರನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಯೋರ್ವ ರೈತನಿಗೆ ಕಪಾಳಮೋಕ್ಷ ಮಾಡಿದಲ್ಲದೆ, ಲಾಠಿ ರೂಚಿ ಸಹ ತೋರಿಸಿದ್ದಾನೆ. ಪೊಲೀಸ್ ಅಧಿಕಾರಿಯ ಈ ವರ್ತನೆ ರೈತರಲ್ಲಿ ಅಸಮಾಧಾನ ಮೂಡಿಸಿದೆ.