ಕಲಬುರಗಿ: ದೇವಸ್ಥಾನಕ್ಕೆ ಹೋಗುವಾಗ ಟಾಟಾ ಏಸ್ ವಾಹನ ಪಲ್ಟಿಯಾದ ಪರಿಣಾಮ ಎಂಟು ವರ್ಷದ ಪುಟ್ಟ ಬಾಲಕಿ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಬಳಿ ನಡೆದಿದೆ.
ಮೃತ ಬಾಲಕಿಯನ್ನು ವಾಡಿಯ ಬಿಯಾಬಾನಿ ಕಾಲೋನಿ ನಿವಾಸಿ ವೈಷ್ಣವಿ ಕಟ್ಟಿಮನಿ ಎಂದು ಗುರುತಿಸಲಾಗಿದೆ. ಸಮೀಪದ ಕೊಂಚೂರು ಆಂಜನೇಯ ದೇವಸ್ಥಾನಕ್ಕೆ ಟಾಟಾ ಏಸ್ನಲ್ಲಿ ಬಾಲಕಿ ಸೇರಿದಂತೆ ಇಬ್ಬರು ತೆರಳುತ್ತಿದ್ದರು.
![Tata Yes Vehicle overturned](https://etvbharatimages.akamaized.net/etvbharat/prod-images/13371332_thumjpg.jpg)
ಈ ವೇಳೆ ಎದುರಿಗೆ ಬಂದ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಟಾಟಾ ಏಸ್ ವಾಹನ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮುಗಿಯುತ್ತಲೇ ಇಲ್ಲ ಹಳೆಕಟ್ಟಡಗಳ ರಗಳೆ.. ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಹಳೆ ಕಟ್ಟಡದ ಗೋಡೆ ಕುಸಿತ