ಕಲಬುರಗಿ: ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಮತ್ತು ಮೃತ ಪ್ರಕರಣಗಳು ದಿನೇ-ದಿನೆ ಹೆಚ್ಚಾಗುತ್ತಲೇ ಇದೆ. ಇಂದು 7 ವರ್ಷದ ಬಾಲಕಿ ಸೇರಿ 7 ಜನರು ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 186ಕ್ಕೆ ಏರಿಕೆಯಾಗಿದೆ.
ಕಲಬುರಗಿಯ ಬ್ರಹ್ಮಪುರ ಬಡಾವಣೆಯ 75 ವರ್ಷದ ವೃದ್ಧೆ, ಜೇವರ್ಗಿ ತಾಲೂಕಿನ ಹಿಪ್ಪರ್ಗಾ ಗ್ರಾಮದ 7 ವರ್ಷದ ಬಾಲಕಿ, ಕಲಬುರಗಿಯ ರೆಹಮತ್ ನಗರದ 41 ವರ್ಷದ ವ್ಯಕ್ತಿ, ಕೋರ್ಟ್ ರಸ್ತೆಯ 92 ವರ್ಷದ ವೃದ್ಧ, ರಾಮನಗರದ 78 ವರ್ಷದ ವೃದ್ಧ, ಗಾಂಧಿನಗರ ಬಡಾವಣೆಯ 60 ವರ್ಷದ ವೃದ್ಧ, ಮೆಹಬೂಬ್ ನಗರದ 60 ವರ್ಷದ ವೃದ್ಧೆ ಸೇರಿ ಒಟ್ಟು ಏಳು ಜನರುು ಇಂದು ನಿಧನರಾಗಿದ್ದಾರೆ.
ಇವರಲ್ಲಿ 7 ವರ್ಷದ ಬಾಲಕಿ ಹೊರತು ಪಡಿಸಿದರೆ ಇನ್ನುಳಿದವರು ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಕಾಯಿಲೆಗಳ ಜೊತೆಯಲ್ಲಿ ತೀವ್ರ ಉಸಿರಾಟ ಸಮಸ್ಯೆ ಎದುರಾಗಿ ಸಾವನ್ನಪ್ಪಿದ್ದಾರೆ. ಇಂದು ಮೃತರ ವರದಿ ಬಂದಿದ್ದು, ಮೃತ 7 ಜನರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನೂ 186 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 9774ಕ್ಕೆ ಏರಿಕೆಯಾಗಿದೆ. 161 ಮಂದಿ ಇಂದು ಗುಣಮುಖರಾಗಿದ್ದು, ಗುಣಮುಖರ ಸಂಖ್ಯೆ 7715ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1873 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.