ETV Bharat / state

ಕಲುಷಿತ ಆಹಾರ ಸೇವನೆ 20 ಜನ ಅಸ್ವಸ್ಥ: ಪ್ರಾಣಾಪಾಯದಿಂದ ಪಾರು - ಕಲುಷಿತ ಆಹಾರ

ಲಾಡ್ಲೇ ಮಶಾಕ್​ ದರ್ಗಾಕ್ಕೆ ಹರಕೆ ತೀರಿಸಲು ಬಂದವರು ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ

20 people are sick due to consumption of contaminated food
ಕಲುಶಿತ ಆಹಾರ ಸೇವನೆ 20 ಜನ ಅಸ್ವಸ್ಥ
author img

By

Published : Jun 2, 2023, 5:06 PM IST

ಕಲಬುರಗಿ: ದೇವರಿಗೆ ಹರಕೆ ತೀರಿಸಲು ಬಂದವರು ಕಲುಷಿತ ಆಹಾರ ಸೇವನೆ‌ ಮಾಡಿ ಅಸ್ವಸ್ಥಗೊಂಡಿರುವ ಘಟನೆ ಆಳಂದ ತಾಲೂಕಿನ ಲಾಡ್ಲೇ ಮಶಾಕ್ ದರ್ಗಾದಲ್ಲಿ ನಡೆದಿದೆ. ಕಲುಷಿತ ಆಹಾರ ಸೇವಿಸಿ 20ಕ್ಕೂ ಹೆಚ್ಚುನ ಜನ ಅಸ್ವಸ್ಥಗೊಂಡಿದ್ದಾರೆ. ಆಳಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗ್ತಿದೆ.

ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಡೋಣಿ ಗ್ರಾಮದಿಂದ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತಿರಿಸಲು ಬಂದಿದ್ದರು. ಊಟ ಸೇವಿಸಿದ ಬಳಿಕ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಊರಿನಿಂದ ಬರುವಾಗ ಕಟ್ಟಿಕೊಂಡು ಬಂದಿದ್ದ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಎಲ್ಲ ಅಸ್ವಸ್ಥರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಳಂದ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ‌.

ಆಳಂದ ತಾಲೂಕು ಆಸ್ಪತ್ರೆ ವೈದ್ಯ ಪ್ರಮೋದ್​ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಾರಂಭದಲ್ಲಿ 14 ಮಂದಿ ಗಂಭೀರವಾಗಿದ್ದು, ಈಗ ಸುಧಾರಿಸಿದ್ದಾರೆ. ಇನ್ನೂ 8 ಮಂದಿ ಇದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಒಂದು ಮಗು ಸಾವನ್ನಪ್ಪಿದ್ದು ಮಾತ್ರವ್ಲಲದೇ, ಮೂವತ್ತು ಜನ ಅಸ್ವಸ್ಥರಾಗಿದ್ದ ಘಟನೆ ನಡೆದಿತ್ತು.

ರಾಯಚೂರು ಜಿಲ್ಲೆಯ ದೇವುರ್ಗ ತಾಲೂಕಿನ ರೇಕಲಮರಡಿ ಗ್ರಮಾದ ಜನರು ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪವೂ ಕೇಳಿ ಬಂದಿತ್ತು. ಮೂವತ್ತು ಮಂದಿ ಅಸ್ವಸ್ಥಗೊಂಡು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ, ಮಗು ಮಾತ್ರ ವಾಂತಿ ಭೇದಿಯಿಂದಾಗಿ ಸಾವನ್ನಪ್ಪಿತ್ತು.

ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಚರಂಡಿ ನೀರಿನ ಪೈಪ್​ ಒಡೆದು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಂಡಿತ್ತು. ಆ ನೀರನ್ನು ಕುಡಿದು ಜನ ಅಸ್ವಸ್ಥಗೊಂಡಿದ್ದಾರೆ. ಪಂಚಾಯಿತಿಯವರು ಕೂಡಲೇ ಕಪೈಪ್​ ಲೈನ್​ ಬದಲಿಸಬೇಕು ಎಂದು ಒತ್ತಾಯಿಸಿದ್ದರು. ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ಆರತಕ್ಷತೆ ವೇಳೆ ಕಲುಷಿತ ಆಹಾರ ಸೇವಿಸಿ 50 ಜನರು ಅಸ್ವಸ್ಥಗೊಂಡ ಘಟನೆ ರಟ್ಟಿಹಳ್ಳಿ ತಾಲೂಕು ಚಪ್ಪರದಳ್ಳಿ ಗ್ರಾಮದಲ್ಲಿ ನಡೆದಿತ್ತು.

ಕೆಲವು ದಿನಗಳ ಹಿಂದೆ ಬಿಹಾರದ ಜೋಗ್ಬಾನಿಯಾದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದ ಹೊತ್ತು ತಟ್ಟೆಯಲ್ಲಿ ಹಾವು ಪತ್ತೆಯಾಗಿತ್ತು. ಈ ಆಹಾರವನ್ನು ಸೇವಿಸಿ 25 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗ ದಾಖಲಾಗಿದ್ದರು. ಮಧ್ಯಾಹ್ನ ಮಕ್ಕಳಿಗೆ ಖಿಚಡಿ ನೀಡಲಾಗಿತ್ತು. ಆ ವೇಳೆ, ಒಂದು ತಟ್ಟೆಯಲ್ಲಿ ಸತ್ತ ಹಾವು ಕಾಣಿಸಿಕೊಮಡಿತ್ತು. ಅದಕ್ಕೂ ಮುನ್ನ ಈ ಆಹಾರವನ್ನು ಸೇವಿಸ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ವಿರುದ್ಧ, ಆಡಳಿತ ವಿರುದದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಘಟನೆ ಮಾಸುವ ಮುನ್ನವೇ ಬಿಹಾರದ ಮತ್ತೊಂದು ಸರರ್ಕಾರಿ ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಗಾಹಾದಲ್ಲಿ ಗುರುವಾರ ನಡೆದಿತ್ತು. ಶಾಲೆಗೆ ಎನ್​ಜಿಓ ಒಂದು ಮಧ್ಯಾಹ್ನದ ಆಹಾರವನ್ನು ಪೂರೈಸುತ್ತಿದ್ದು, ಎನ್​ಜಿಓ ನೀಡಿದ ಆಹಾರವನ್ನು ಸೇವಿಸಿ 100ಕ್ಕೂ ಹೆಚ್ಚು ಮಕ್ಕಳಉ ಅಸ್ವಸ್ಥಗೊಮಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗ ದಾಖಲಿಸಲಾಗಿತ್ತು. ಶಾಲೆ ಹಾಗೂ ಎನ್​ಜಿಒ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಬಗಾಹಾದ ಎಸ್​ಡಿಎಂ ಹೇಳಿದ್ದರು.

ಇದನ್ನೂ ಓದಿ: ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಸೇವಿಸಿದ 50ಕ್ಕೂ ಹೆಚ್ಚು ಜನ ಅಸ್ವಸ್ಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.