ಕಲಬುರಗಿ: ಸಿಡಿಲು ಬಡಿದು ಏಕಕಾಲಕ್ಕೆ 17 ಜಾನುವಾರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕಾಳಗಿ ತಾಲೂಕಿನ ಲಕ್ಷ್ಮಣನಾಯಕ ತಾಂಡಾದಲ್ಲಿ ನಡೆದಿದೆ.
ಲಕ್ಷ್ಮಣನಾಯಕ ತಾಂಡಾದ ನಿವಾಸಿಗಳು ಹಸುಗಳನ್ನು ಹಜರತ್ ಭಾಷಾ ಖದೀರ್ ದರ್ಗಾ ಗುಡ್ಡದಲ್ಲಿ ಮೇಯಿಸಲು ಹೊಡೆದುಕೊಂಡು ಹೋದಾಗ ಸಿಡಿಲು ಬಡಿದಿದ್ದು, 13 ಹಸುಗಳು ಮತ್ತು 4 ಎತ್ತುಗಳು ಸಾವನ್ನಪ್ಪಿವೆ. ಅಷ್ಟೇ ಅಲ್ಲದೆ, ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: ಸಿಡಿಲು - ಗುಡುಗು ಸಹಿತ ಮಳೆಗೆ ಮೂರು ಕುದುರೆ ಸೇರಿ 50 ಕುರಿಗಳ ಸಾವು, ವ್ಯಕ್ತಿಗೆ ಗಾಯ
ಈ ಕುರಿತು ಮಾಹಿತಿ ತಿಳಿದ ಶಾಸಕ ಅವಿನಾಶ ಜಾಧವ ತಾಂಡಾಕ್ಕೆ ಭೇಟಿ ನೀಡಿ, ಪರಿಹಾರ ನೀಡಿದರು. ಸರ್ಕಾರಿ ಅನುದಾನದಿಂದ ಜಾನುವಾರು ಕಳೆದುಕೊಂಡವರಿಗೆ ಪರಿಹಾರ ಚೆಕ್ ವಿತರಿಸಿದರು.