ಹಾವೇರಿ/ದಾವಣಗೆರೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ದಾವಣಗೆರೆ-304, ಹಾವೇರಿ-23, ಕಾರವಾರದಲ್ಲಿ-94 ಮಂದಿಯಲ್ಲಿ ಕೊರೊನಾ ಧೃಡಪಟ್ಟಿದೆ.
ಹಾವೇರಿ ಜಿಲ್ಲೆಯಲ್ಲಿ ಇಂದು 23 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,171ಕ್ಕೇರಿದೆ. ಬ್ಯಾಡಗಿ- 02, ಹಾವೇರಿ- 05, ಹಿರೇಕೆರೂರು ಮತ್ತು ಸವಣೂರು ತಾಲೂಕುಗಳಲ್ಲಿ ತಲಾ 04, ರಾಣೆಬೆನ್ನೂರು- 7 ಜನರಿಗೆ ಕೊರೊನಾ ತಗುಲಿದೆ. ಪ್ರಸ್ತುತ 335 ಜನ ಹೋಂ ಐಸೋಲೇಷನ್ನಲ್ಲಿದ್ದಾರೆ. 104 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 304 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 19,878ಕ್ಕೇರಿದೆ. ಚನ್ನಗಿರಿ ತಾಲೂಕಿನ ಬಸವಪಟ್ಟಣದ 70 ವರ್ಷದ ವೃದ್ಧೆ ಕೊರೊನಾದಿಂದ ಮೃತಪಟ್ಟಿದ್ದು, ಇದುವರೆಗೆ 252 ಜನರು ಬಲಿಯಾದಂತಾಗಿದೆ. ದಾವಣಗೆರೆ- 140, ಹರಿಹರ- 53, ಜಗಳೂರು- 28, ಚನ್ನಗಿರಿ- 35, ಹೊನ್ನಾಳಿ- 44 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ನಾಲ್ವರಲ್ಲಿ ವೈರಾಣು ಇರುವುದು ಖಚಿತವಾಗಿದೆ. 137 ಸೋಂಕಿತರು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಪ್ರಸ್ತುತ 1,220 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 94 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,312ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ -6, ಅಂಕೋಲಾ- 5, ಕುಮಟಾ-8, ಹೊನ್ನಾವರ- 7, ಶಿರಸಿ -10, ಸಿದ್ದಾಪುರ- 2, ಯಲ್ಲಾಪುರ- 1, ಮುಂಡಗೋಡ- 49, ಹಳಿಯಾಳ- 5 ಹಾಗೂ ಜೊಯಿಡಾದಲ್ಲಿ ಓರ್ವನಿಗೆ ಸೋಂಕು ದೃಢಪಟ್ಟಿದೆ. 1,210 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, ಈವರೆಗೂ 160 ಮಂದಿ ಮೃತಪಟ್ಟಿದ್ದಾರೆ.