ETV Bharat / state

ಪರೀಕ್ಷೆಗಳು ಪಾರದರ್ಶಕವಾಗಿರಲಿ ಅಂತಾ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ; ಫೋಟೋ ವೈರಲ್ - ಸತೀಶ ಹೆಸರಿನ ಫೇಸ್ ಬುಕ್ ಅಕೌಂಟ್ ನಲ್ಲಿ ಫೋಟೋಗಳನ್ನ ವೈರಲ್

ಪರೀಕ್ಷೆಗಳು ಪಾರದರ್ಶಕವಾಗಿ ನಡಿಯಬೇಕು ಅಂತಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನ ಕೈಗೊಳ್ಳೋದು ಕಾಮನ್. ಆದ್ರೆ ಜಿಲ್ಲೆಯಲ್ಲೊಂದು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಸಲಾಗಿದೆ.

ಪರೀಕ್ಷೆಗಳು ಪಾರದರ್ಶಕವಾಗಿರಲಿ ಅಂತಾ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ; ಫೋಟೋಗಳು ವೈರಲ್
author img

By

Published : Oct 18, 2019, 4:40 PM IST

Updated : Oct 18, 2019, 7:41 PM IST

ಹಾವೇರಿ: ಪರೀಕ್ಷೆಗಳು ಪಾರದರ್ಶಕವಾಗಿ ನಡಿಬೇಕು ಅಂತಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನ ಕೈಗೊಳ್ಳೋದು ಕಾಮನ್. ಆದ್ರೆ ಜಿಲ್ಲೆಯಲ್ಲೊಂದು ಪದವೀ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಯಿಸಲಾಗಿದೆ.

ಕಳೆದೆರಡು ದಿನಗಳ ಹಿಂದೆ ನಗರದ ಭಗತ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪರೀಕ್ಷೆಗಳು ನಡೆದಿದ್ದವು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆ ಕಡೆ ಚಿತ್ತ ಹರಿಸಬಾರದು, ನಕಲು ಮಾಡಬಾರ್ದು ಅಂತಾ ಶಿಕ್ಷಣ ಸಂಸ್ಥೆ ಇಂತಹ ಪ್ರಯೋಗಕ್ಕೆ ಮುಂದಾಗಿತ್ತಂತೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಸಿದ್ದ ಸಂಸ್ಥೆಯವರು ನಂತರದಲ್ಲಿ ಸಂಸ್ಥೆಯ ಅಧ್ಯಕ್ಷ ಸತೀಶ ಹೆಸರಿನ ಫೇಸ್ ಬುಕ್ ಅಕೌಂಟ್ ನಲ್ಲಿ ಫೋಟೋಗಳನ್ನ ವೈರಲ್ ಮಾಡಲಾಗಿದೆ.

ಪರೀಕ್ಷೆಗಳು ಪಾರದರ್ಶಕವಾಗಿರಲಿ ಅಂತಾ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ನಡೆಸಿದ ಸಂಸ್ಥೆ

ಶಿಕ್ಷಣ ಇಲಾಖೆ ಅಧಿಕಾರಿಗಳು ಅದು ತಪ್ಪು ಅಂತಾ ಹೇಳಿದ ಮೇಲೆ ಆ ರೀತಿ ಪರೀಕ್ಷೆ ಬರೆಸೋದನ್ನ ಕೈಬಿಟ್ಟಿದೆ. ಒಂದು ಗಂಟೆ ಕಾಲ ತಲೆಗೆ ಡಬ್ಬಿ ಹಾಕ್ಕೊಂಡೇ ಪರೀಕ್ಷೆ ಬರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು ನಂತರ ತಲೆಗೆ ಹಾಕ್ಕೊಂಡಿದ್ದ ಡಬ್ಬಿ ತೆಗೆದಿದ್ದಾರೆ.

ವಿದ್ಯಾರ್ಥಿಗಳ ಚಿತ್ತ ಬೇರೆ ಕಡೆ ಹೋಗಬಾರ್ದು ಮತ್ತು ನಕಲು ಮಾಡಲು ಅವಕಾಶ ಇರಬಾರ್ದು ಅನ್ನೋ ಕಾರಣಕ್ಕೆ ಹೊಸ ಪ್ರಯೋಗ ಮಾಡಿದ್ವಿ. ಪರ ವಿರೋಧ ವ್ಯಕ್ತವಾದ್ಮೇಲೆ ಅದನ್ನ ಕೈಬಿಟ್ಟು ಎಂದಿನಂತೆ ಪರೀಕ್ಷೆ ನಡೆಸ್ತಿದ್ದೇವೆ ಅಂತಾ ಸಂಸ್ಥೆಯ ಅಧ್ಯಕ್ಷ ಸತೀಶ ಹೇಳಿದ್ದಾರೆ.

ಈ ರೀತಿ ಪರೀಕ್ಷೆ ಬರೆದಿದ್ದರಿಂದ ವಿದ್ಯಾರ್ಥಿಗಳಿಗೆ ಗಾಳಿ ಆಡಲಾರದಂತಹ ಸ್ಥಿತಿ ನಿರ್ಮಾಣ ಆಗಿದೆ. ಕಾಲೇಜಿನಲ್ಲಿ ಸಾಕಷ್ಟು ವಿದ್ಯಾರ್ಥಿಗಳು ನೋವು ಅನುಭವಿಸಿದ್ರೂ ಹೇಳಿಕೊಳ್ಳದಂತಾಗಿದ್ರು ಎನ್ನಲಾಗಿದೆ.

havery
ಪರೀಕ್ಷೆಗಳು ಪಾರದರ್ಶಕವಾಗಿರಲಿ ಅಂತಾ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ; ಫೋಟೋಗಳು ವೈರಲ್

ಈ ರೀತಿ ಪರೀಕ್ಷೆ ಬರೆಸಿದ ಫೋಟೋಗಳು ವೈರಲ್ ಆಗ್ತಿದ್ದಂತೆ ಸಂಸ್ಥೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಇಲಾಖೆಯ ನಿಯಮದಲ್ಲಿ ಈ ರೀತಿಯಲ್ಲಿ ಪರೀಕ್ಷೆ ನಡೆಸಲು ಅವಕಾಶವಿಲ್ಲ ಅಂತಾ ತಾಕೀತು ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯವರ ಕಡೆಯಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಇನ್ಮುಂದೆ ತಲೆಗೆ ಡಬ್ಬಿ ಹಾಕಿ ಪರೀಕ್ಷೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

Intro:ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಸಿದ ಶಿಕ್ಷಣ ಸಂಸ್ಥೆ.
ಹಾವೇರಿ ನಗರದ ಭಗತ್ ಪಿಯು ಕಾಲೇಜಿನಲ್ಲಿ ಘಟನೆ.
ಕಳೆದೆರಡು ದಿನಗಳ ಹಿಂದೆ ನಡೆದ ಪಿಯುಸಿ ಪರೀಕ್ಷೆ ವೇಳೆ ಡಬ್ಬಿ ಹಾಕಿ ಪರೀಕ್ಷೆ ಬರೆಸಿದ್ದ ಶಿಕ್ಷಣ ಸಂಸ್ಥೆಯವರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪರೀಕ್ಷೆ ಬರೆಯೋ ಫೋಟೋಗಳು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಸಿದ ಸಂಸ್ಥೆಯವರು.Body:SameConclusion:Same
Last Updated : Oct 18, 2019, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.