ಹಾವೇರಿ : ಮಾರ್ಚ್ 7, 2021ರಂದು ಮನೆಯಿಂದ ಕಾಣೆಯಾಗಿದ್ದ ಹನ್ನೊಂದು ವರ್ಷದ ಬಾಲಕ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ.
ನಗರದ ಅಶ್ವಿನಿ ನಗರದ ನಿವಾಸಿಯಾಗಿದ್ದ ತೇಜಸ್ ಗೌಡ ಮಲ್ಲಿಕೇರಿ ಎಂಬಾತನೇ ಕೊಲೆ ಆಗಿದ್ದಾನೆ ಎನ್ನಲಾದ ಬಾಲಕ. ಮಾರ್ಚ್ 8, 2021ರಂದು ಬಾಲಕನ ಸಂಬಂಧಿಕರು ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಆದರೆ, ಯಾರೋ ಬಾಲಕನನ್ನ ಕೊಲೆ ಮಾಡಿ ಸುಟ್ಟು ಹಾಕಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಶಂಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಹಾಗೂ ನಗರ ಠಾಣೆ ಪೊಲೀಸರು ಬಾಲಕನನ್ನ ಸುಟ್ಟು ಹಾಕಿದ್ದಾರೆ ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಲಕನ ಕೊಲೆಯಾಗಿರೋ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡಗಳನ್ನ ರಚನೆ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಓದಿ : ಜೋಡೆತ್ತಿನ ಗಾಡಿ ಸ್ಪರ್ಧೆ : ಘಟನೆ ಕಪ್ಪು ಚುಕ್ಕೆಯಾದ ದುರಂತ 'ಓಟ'