ETV Bharat / state

ರಾಣೆಬೆನ್ನೂರು ನಗರಸಭೆ: ಗದ್ದಲ ಚರ್ಚೆ ನಡುವೆ ಹಲವು ಯೋಜನೆಗಳಿಗೆ ಅನುಮೋದನೆ

ಗದ್ದಲದ ನಡುವೆ ಇಂದು ರಾಣೆಬೆನ್ನೂರು ನಗರಸಭೆಯ ಪ್ರಥಮ ಸಾಮಾನ್ಯ ಸಭೆಯನ್ನು ನಡೆಸಲಾಯಿತು. ನಾನಾ ಸಮಸ್ಯೆಗಳನ್ನು ಚರ್ಚೆ ಮಾಡಿ, 61 ವಿವಿಧ ಕೆಲಸಗಳಿಗೆ ಅನುಮೋದನೆ ನೀಡಲಾಗಿದೆ.

The first general meeting of the Ranebennur Municipality
ರಾಣೆಬೆನ್ನೂರು ನಗರಸಭೆಯ ಪ್ರಥಮ ಸಾಮಾನ್ಯ ಸಭೆ ಯಶಸ್ವಿ
author img

By

Published : Dec 5, 2020, 4:11 PM IST

ರಾಣೆಬೆನ್ನೂರು (ಹಾವೇರಿ): ಇಂದು ರಾಣೆಬೆನ್ನೂರು ನಗರಸಭೆಯ ಪ್ರಥಮ ಸಾಮಾನ್ಯ ಸಭೆ ನಡೆದಿದ್ದು, ಗದ್ದಲ ಹಾಗೂ ಚರ್ಚೆಯ ನಡುವೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಸಭೆ ಪ್ರಾರಂಭಕ್ಕೂ ಮೊದಲೇ 31ನೇ ವಾರ್ಡ್​​ನ ಸದಸ್ಯರು, ತಮ್ಮನ್ನು ಕಡೆಗಣಿಸಿ ಕಾಮಗಾರಿಗಳನ್ನು ಹಾಕಲಾಗುತ್ತಿದೆ. ಈಗಲೇ ನನ್ನ ವಾರ್ಡಿಗೆ ಕೆಲಸಗಳಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಮ್ಮತಿ ನೀಡಿದ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮುಂದಿನ ಬಾರಿ ವಿಶೇಷವಾಗಿ ಕಾಮಗಾರಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ರಾಣೆಬೆನ್ನೂರು ನಗರಸಭೆಯ ಪ್ರಥಮ ಸಾಮಾನ್ಯ ಸಭೆ ಯಶಸ್ವಿ

ಓದಿ: ರಾಣೆಬೆನ್ನೂರು: ಸಿಎಂ ಮನವಿ ಮಾಡಿದರೂ 'ಕಮಲ' ಬಿಟ್ಟು 'ಕೈ' ಹಿಡಿದ ನಗರಸಭೆ ಸದಸ್ಯ

ಇನ್ನು ಶಾಸಕ ಅರುಣಕುಮಾರ ಪೂಜಾರ ಅವರು ಸುಮಾರು ಐದು ಕೋಟಿ ರೂ. ಅನುದಾನವನ್ನು ಕೇವಲ ಮೂರು ವಾರ್ಡ್​​ಗೆ ಹಾಕಿದ್ದಾರೆ. ಇದರಿಂದ ಇನ್ನುಳಿದ ವಾರ್ಡ್​​ಗೆ ಅನ್ಯಾಯವಾಗಿದೆ ಎಂದು ಸದಸ್ಯ ನಿಂಗರಾಜ ಕೋಡಿಹಳ್ಳಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಶಾಸಕರು ಯಾವುದೇ ತಾರತಮ್ಯ ಮಾಡಿಲ್ಲ. ಬಳ್ಳಾರಿ ಜಿಲ್ಲೆ ಮತ್ತು ಹಾವೇರಿ ಜಿಲ್ಲೆ ಸಂಪರ್ಕ ಸೇರುವ ರಸ್ತೆಯನ್ನು ‌ಅಭಿವೃದ್ಧಿ ಮಾಡುವ ಸಲುವಾಗಿ ಕೆಲ ವಾರ್ಡ್​​ಗಳಿಗೆ ಅನುದಾನ ನೀಡಲಾಗಿದೆ ಎಂದು ಉತ್ತರಿಸಿದರು.

ಇನ್ನು ಸಭೆಯಲ್ಲಿ ಸುಮಾರು 61 ವಿವಿಧ ಕೆಲಸಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ದುರ್ಗಾ ತರಕಾರಿ ಮಾರುಕಟ್ಟೆಯಲ್ಲಿ ಹಣ್ಣಿನ‌ ಮಳಿಗೆ ನಿರ್ಮಾಣ, ತ್ಯಾಜ್ಯ ನಿರ್ವಹಣೆಗೆ ಸಿಬ್ಬಂದಿ ಆಯ್ಕೆ, ಒಳಚರಂಡಿ ನಿರ್ಮಾಣ, ನಗರಸಭಾ ಅಧ್ಯಕ್ಷರಿಗೆ ಹೊಸ ಕಾರು ಖರೀದಿ, ನಗರಸಭಾ ನೌಕರರಿಗೆ ವೈದ್ಯಕೀಯ ಭತ್ಯೆ ಸೇರಿಕೊಂಡಿವೆ.

ಸಭೆಯಲ್ಲಿ ಶಾಸಕ ಅರುಣಕುಮಾರ ಪೂಜಾರ, ಉಪಾಧ್ಯಕ್ಷೆ ಕಸ್ತೂರವ್ವ ಚಿಕ್ಕಬಿದರಿ, ಆಯುಕ್ತ ಡಾ.ಎನ್‌. ಮಹಾಂತೇಶ ಸೇರಿದಂತೆ ನಗರಸಭಾ ಸದಸ್ಯರು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.