ETV Bharat / state

ಶಿಶುನಾಳ ಶರೀಫರ ವಿಚಾರ ಧರ್ಮದ ಚೌಕಟ್ಟು ಮೀರಿದ್ದು: ಸಿಎಂ ಬೊಮ್ಮಾಯಿ - ETV Bharat kannada News

ಸಂತ ಶಿಶುನಾಳ ಶರೀಫರು ವಿಸ್ಮಯ ಕವಿ. ಅವರ ತತ್ವಪದಗಳನ್ನು ಅರ್ಥಮಾಡಿ ಕೊಂಡವರಿಗೆ ಅದರ ವಿಚಾರ ಗೊತ್ತಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

CM Basavaraj Bommayi
ಸಿಎಂ ಬಸವರಾಜ್ ಬೊಮ್ಮಾಯಿ
author img

By

Published : Mar 3, 2023, 8:21 AM IST

Updated : Mar 3, 2023, 9:08 AM IST

ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್​ ರಥೋತ್ಸವ

ಹಾವೇರಿ : ಶಿಶುನಾಳ ಶರೀಫರ ವಿಚಾರ ಧರ್ಮದ ಚೌಕಟ್ಟನ್ನು ಮೀರಿರುವುದು. ಅವರು ಅತ್ಯಂತ ವಿಸ್ಮಯಕಾರಿ ಕವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾಂವಿ ತಾಲೂಕು ಶಿಶುನಾಳದಲ್ಲಿಅದ್ಧೂರಿಯಾಗಿ ನಡೆದ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್​ ರಥೋತ್ಸವದ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗೋಡೆಯೇ ಸುಣ್ಣವ ನುಂಗಿತ್ತು, ಕೋಡಗನ ಕೋಳಿ ನುಂಗಿತ್ತು, ತರವಲ್ಲ ತಂಗಿ ನಿನ್ನ ತಂಬೂರಿ, ಸೋರುತಿಹುದು ಮನೆಯ ಮಾಳಿಗೆ.. ಈ ಹಾಡುಗಳಲ್ಲಿ ಅದೆಷ್ಟೋ ಅರ್ಥಗಳಿವೆ, ತಿಳಿದುಕೊಳ್ಳುವ ಮನಸ್ಸಿರಬೇಕು. ತಿಳಿದುಕೊಳ್ಳಲು ಸಮಯ ಬೇಕು. ಆ ಭಾವನೆಗಳಿದ್ದಾಗ ಮಾತ್ರ ಅದು ಅರ್ಥವಾಗುತ್ತದೆ. ಶಿಶುನಾಳ ಶರೀಫರು ಜೀವನದ ಮೌಲ್ಯ, ನಿಜ ಜೀವನದ ಅರ್ಥ ಮತ್ತು ಮಾನವೀಯ ಸಂಬಂಧಗಳ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ ಎಂದರು.

ಥೀಮ್ ಪಾರ್ಕ್ ನಿರ್ಮಾಣ: ಮುಂದಿನ ದಿನಗಳಲ್ಲಿ ಶಿಶುನಾಳದಲ್ಲಿ ಶರೀಫರ ತತ್ವಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಿ, ಶರೀಫರು ನಡೆದಾಡಿ ಹೋಗಿರುವ ಎಲ್ಲ ಘಟನೆಗಳನ್ನು ಚಿತ್ರಿಸುವ ಕಾರ್ಯ ಮಾಡುವುದಾಗಿ ಪ್ರಕಟಿಸಿದರು. ಶಿಶುನಾಳದ ಅಭಿವೃದ್ದಿಗೆ ಹಲವು ಯೋಜನೆಗಳ ರೂಪಿಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ 8 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳು ನಡೆಯುತ್ತೀವೆ. ಸಮಗ್ರ ಅಭಿವೃದ್ದಿಗೆ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸಿಎಂ, ಶಿಶುನಾಳ ಶರೀಫರ ಗದ್ದುಗೆ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪಂಚಾಗ್ನಿ ಮಠ ಟ್ರಸ್ಟ್‌ ವತಿಯಿಂದ ಸಿಎಂ ಅವರನ್ನು ಗೌರವಿಸಲಾಯಿತು. ಗದ್ದುಗೆ ದರ್ಶನಕ್ಕೆ ನಿಂತಿದ್ದ ಜನಸಾಮಾನ್ಯರ ಕಡೆಗೆ ಹೋಗಿ ಕೈಬೀಸಿದ ಬೊಮ್ಮಾಯಿ ಪರಿಚಯಸ್ಥರನ್ನು ಗುರುತು ಹಿಡಿದು ಮಾತನಾಡಿಸಿ ಕುಶಲೋಪರಿ ಹಂಚಿಕೊಂಡರು.

ರಘು ದೀಕ್ಷಿತ್​ ಸಂಗೀತ ಸಂಜೆ: ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಗಾಯಕ ರಘು ದೀಕ್ಷಿತ್​ ಮತ್ತು ಅವರ ತಂಡ ಸಭಿಕರಿಗೆ ಸಂಗೀತದ ರಸದೌತಣ ಉಣಬಡಿಸಿತು. ಇದಕ್ಕೂ ಮುನ್ನ ರಘು ದೀಕ್ಷಿತ್ ಮಾತನಾಡಿ, "ಶರೀಫರ ಗೀತೆಗಳು ನನ್ನನ್ನು ಈ ಮಟ್ಟಕ್ಕೆ ತಂದಿವೆ. ನನಗೆ ಆರೋಗ್ಯ ಸರಿಯಿಲ್ಲದ ಕಾರಣ ವೈದ್ಯರು ಮೂರು ತಿಂಗಳು ಹಾಡಬೇಡ ಎಂದಿದ್ದಾರೆ. ಆದರೆ ಶರೀಫಜ್ಜನ ಗದ್ದುಗೆಗೆ ಬಂದಿದ್ದೇನೆ, ಎಲ್ಲ ಅವನೇ ನೋಡಿಕೊಳ್ಳುತ್ತಾನೆ" ಎಂದರು.

"ಜೀವನದಲ್ಲಿ ನಾನು ಯಾರಿಗೂ ಸಹ ಕೆಟ್ಟದನ್ನು ಮಾಡಿಲ್ಲ. ಆದರೂ ಸಹ ನನ್ನ ಜೀವನದಲ್ಲಿ ಏರಿಳಿತಗಳಾಗುತ್ತಿವೆ" ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು. "ಶರೀಫರ ಗೀತೆಗಳನ್ನು ವಿದೇಶದಲ್ಲಿಯೂ ಸಹ ಅತಿಹೆಚ್ಚು ಮಂದಿ ಆಸಕ್ತಿಯಿಂದ ಕೇಳುತ್ತಾರೆ. ಶರೀಫರ ತತ್ವಪದಗಳ ಅರ್ಥ ತಿಳಿದಾಗ ಮಾತ್ರ ಗೀತೆಗಳು ಹೆಚ್ಚು ಹತ್ತಿರವಾಗುತ್ತವೆ" ಎಂದರು.

ಇದನ್ನೂ ಓದಿ :ಸಾಮರಸ್ಯದ ಪ್ರತೀಕವಾದ ಶಿಶುನಾಳ ಶರೀಫ ಗಿರಿಯಲ್ಲಿ ಅದ್ಧೂರಿ ರಥೋತ್ಸವ

Last Updated : Mar 3, 2023, 9:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.