ETV Bharat / state

ನಡು ರಸ್ತೆಯಲ್ಲಿ ಅಟ್ಟಾಡಿಸಿ ಸವಣೂರು ರೌಡಿಶೀಟರ್​ ಬರ್ಬರ ಹತ್ಯೆ.. ವಿಡಿಯೋ ವೈರಲ್​​​..! - ಹಜರತ್​​ ಕೊಲೆ ವಿಡಿಯೋ ವೈರಲ್​

ಸವಣೂರು ರೌಡಿಶೀಟರ್​ ಹಜರತ್​​ ಕೊಲೆ ವಿಡಿಯೋ ವೈರಲ್​ ಆಗಿದ್ದು, ಇಡಿ ಹಾವೇರಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಜನ ಸಂಚರಿಸುತ್ತಿದ್ದ ನಡು ರಸ್ತೆಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆಗೈದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಜಿಲ್ಲೆಯಾದ್ಯಂತ ಹರಿದಾಡುತ್ತಿದ್ದು, ನೋಡುಗರ ಮೈ ನಡಗಿಸುವಂತಿದೆ.

rowdy-sheeter-savanur-hazrat-murder-video
ಸವಣೂರು ರೌಡಿಶೀಟರ್​ ಬರ್ಬರ ಹತ್ಯೆ
author img

By

Published : Aug 9, 2021, 7:51 PM IST

Updated : Aug 10, 2021, 1:31 PM IST

ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಭಾನುವಾರ ನಡೆದ ರೌಡಿಶೀಟರ್ ಬರ್ಬರ ಹತ್ಯೆಯ ವಿಡಿಯೋ ವೈರಲ್ ಆಗಿದ್ದು, ಕಂದ್ಲಿ ಮತ್ತು ಕೊಡಲಿಯಿಂದ ಹಾಡಹಗಲೇ ನಡು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ರೌಡಿ ಶೀಟರ್‌ ಹಜರತ್ ಅಲಿಯಾಸ್ ಅನ್ವರ್ ಶೇಖ್ ಅಲಿಯಾಸ್ ಮೋಮಿನ್‌ನನ್ನ ಪಟ್ಟಣದ ಕಾರಡಗಿ ರಸ್ತೆಯಲ್ಲಿ ಭಾನುವಾರ ಸಂಜೆ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸದ್ಯ ಘಟನೆಗೆ ಸಂಬಂಧಿಸಿ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಮೂವರು ಯುವಕರು ಕಂದ್ಲಿ ಮತ್ತು ಕೊಡಲಿಯಿಂದ ಮುಖ ಮತ್ತು ಕುತ್ತಿಗೆಗೆ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಸವಣೂರು ರೌಡಿಶೀಟರ್​ ಬರ್ಬರ ಹತ್ಯೆಯ ವಿಡಿಯೋ

ಘಟನೆಯ ಹಿನ್ನೆಲೆ

ಭಾನುವಾರ ಸಂಜೆ ರೌಡಿ ಶೀಟರ್​​​ ಹಜರತ್​​ ಕೊಲೆ ಮಾಡಲಾಗಿತ್ತು. ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಇಮ್ರಾನ್ ಚೌದರಿ ತಾನೊಬ್ಬನೇ ಕೊಲೆ ಮಾಡಿದ್ದಾಗಿ ತಿಳಿಸಿದ್ದ. ಆದರೆ, ವೈರಲ್​ ಆದ ವಿಡಿಯೋದಲ್ಲಿ ಮೂವರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಸದ್ಯ ಆರೋಪಿ ಇಮ್ರಾನ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆಯಾದ ಹಜರತ್ ರಾಜ್ಯ ಸೇರಿದಂತೆ ಗೋವಾದಲ್ಲಿ ಹಲವು ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

Last Updated : Aug 10, 2021, 1:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.