ಹಾವೇರಿ : ಎಗ್ರೈಸ್ ತಿಂದ ಹಣ ಕೇಳಿದ್ದಕ್ಕೆ ರೌಡಿ ಶೀಟರ್ ಓರ್ವ ಅಂಗಡಿ ಮಾಲೀಕನ ಮೇಲೆ ಮಚ್ಚು ಬೀಸಲು ಮುಂದಾದ ಘಟನೆ ರಾಣೆಬೆನ್ನೂರಲ್ಲಿ ನಡೆದಿದೆ.
ಫಕ್ಕಿರೇಶ ಅಂಗಡಿ ಮಚ್ಚು ಬೀಸಿದ ರೌಡಿ ಶೀಟರ್. ಈತನ ಮೇಲೆ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳಿವೆ. ನಗರದ ಅಂಗಡಯೊಂದರಲ್ಲಿ 2-3 ತಿಂಗಳಿಂದ ಎಗ್ರೈಸ್ ತಿಂದ್ದು, ದುಡ್ಡು ಕೊಟ್ಟಿರಲ್ಲಿಲ್ಲ. ಹೀಗಾಗಿ ಅಂಗಡಿ ಮಾಲೀಕ ಸಿದ್ದಲಿಂಗಪ್ಪ ಚಿನ್ನಿಕಟ್ಟಿ ಹಣ ಕೇಳಿದ್ದರು. ಈ ವೇಳೆ ಫಕ್ಕಿರೇಶ್ ತನ್ನಲ್ಲಿದ್ದ ಮಚ್ಚಿನಿಂದ ಅಂಗಡಿಯಲ್ಲಿದ್ದ ಮೊಟ್ಟೆ ಸೇರಿದಂತೆ ಇತರ ಸಾಮಾಗ್ರಿಗಳನ್ನು ಹಾಳು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಓದಿ : ಪ್ರೇಯಸಿಯನ್ನ ಹಾಸ್ಟೆಲ್‌ಗೆ ಕರೆಯಿಸಿಕೊಂಡ.. ಆಕೆಯನ್ನ ಮರಳಿ ಕಳುಹಿಸಲು ಹೋಗಿ ಪ್ರಾಣ ಕಳ್ಕೊಂಡ
ಫಕ್ಕಿರೇಶ್ ಕೈಯಲ್ಲಿ ಮಚ್ಚು ನೋಡಿ ಹೆದರಿದ್ದರು, ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ರಾಣೆಬೆನ್ನೂರು ಸಿಪಿಐ ಭಾಗ್ಯವಂತಿ ಪೊಲೀಸ್ ಸಿಬ್ಬಂದಿಯೊಂದಿಗೆ ಆಗಮಿಸಿ ಫಕ್ಕಿರೇಶ್‌ನನ್ನ ಹಿಡಿದಿದ್ದಾರೆ. ಆತನ ಕೈಯಲ್ಲಿದ್ದ ಮಚ್ಚು ಕಿತ್ತೆಸೆದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ರಾಣೆಬೆನ್ನೂರು ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಇಂತವರ ಪುಂಡಾಟಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.