ETV Bharat / state

ಹಾವೇರಿ ಶಾಸಕ ಓಲೇಕಾರ್ ಬಗ್ಗೆ ಪರ ವಿರೋಧ ಗೊಂದಲದ ವಾತಾವರಣ.. ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ

author img

By

Published : Feb 12, 2023, 5:25 PM IST

Updated : Feb 12, 2023, 10:04 PM IST

ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಹಾಗೂ ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ ಅಭಿಯಾನದ ಸಮಿತಿ ಸದಸ್ಯರಲ್ಲಿ ತೀವ್ರ ವಾಗ್ಯುದ್ದ- ಕೆಲಕಾಲ ಗೊಂದಲ ವಾತಾವರಣ- ದುಂಡಾವರ್ತನೆಯ ಆರೋಪ

Riot among BJP workers
ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ಯುದ್ದ
ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ

ಹಾವೇರಿ: ಇಲ್ಲಿನ ಪ್ರವಾಸಿಮಂದಿರದ ಸರ್ಕ್ಯೂಟ್ ಹೌಸ್​ವೂ ಭಾನುವಾರ ಕೆಲಕಾಲ ಬಿಜೆಪಿ ಕಾರ್ಯಕರ್ತರ ಗದ್ದಲವು ಗೊಂದಲದ ವಾತಾವರಣಕ್ಕೆ ಸಾಕ್ಷಿಯಾಯಿತು. ಹಾವೇರಿ ಶಾಸಕ ನೆಹರು ಓಲೇಕಾರ್ ವಿರುದ್ಧ ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ ಅಭಿಯಾನದ ಜಾಗೃತಿ ಸಮಿತಿ ಸದಸ್ಯರು ಮತ್ತು ಶಾಸಕ ನೆಹರು ಓಲೇಕಾರ್ ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಿಕಿ ನಡೆಯಿತು.

ಓಲೇಕಾರ್ ಬದಲಾಗಿ ಬೇರೆ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಿ: ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ ಅಭಿಯಾನದ ಅಧ್ಯಕ್ಷ ಸಂತೋಷರೆಡ್ಡಿ ತಬರೆಡ್ಡಿ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಶಾಸಕ ನೆಹರು ಓಲೇಕಾರ್ ಬದಲಾಗಿ ಬೇರೆ ಅಭ್ಯರ್ಥಿ ಹಾಕಬೇಕು ಎಂದು ಆಗ್ರಹಿಸಿದರು. ಶಾಸಕ ನೆಹರು ಓಲೇಕಾರ್ ಅವರು ಗುತ್ತಲದ ಕಾರ್ಯಕ್ರಮವೊಂದರಲ್ಲಿ ಹಾವೇರಿ ಕ್ಷೇತ್ರಕ್ಕೆ 2023 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನನ್ನನ್ನು ಬಿಟ್ಟರೆ ಬೇರೆ ಯಾರು ಎಂದಿದ್ದು, ಅವರದು ದುಂಡಾವರ್ತನೆ ಕ್ರಮ ಎಂದು ಸಂತೋಷರೆಡ್ಡಿ ತಬರೆಡ್ಡಿ ಆರೋಪಿಸಿದರು.

ಆ ಹೇಳಿಕೆ ಹಿನ್ನೆಲೆ ಹಾವೇರಿಗೆ ಶಾಸಕ ನೆಹರು ಓಲೇಕಾರ್ ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂಬ ಅಭಿಯಾನವನ್ನು ಸಮಿತಿ ಹಮ್ಮಿಕೊಂಡಿದೆ. ಬಿಜೆಪಿ ಟಿಕೆಟ್ ಅಕಾಂಕ್ಷಿಗಳಾದ ಪರಮೇಶಪ್ಪ ಮೇಗಳಮನಿ, ಕೆ ಬಿ ಮಲ್ಲಿಕಾರ್ಜುನ, ಮಾಲತೇಶ ಹರಿಜನ, ವೆಂಕಟೇಶ್ ನಾರಾಯಣಿ, ಶ್ರೀಪಾದ ಬೆಟಗೇರಿ ಮತ್ತು ರಾಮು ಮಾಳಗಿ ಆರು ಜನರಲ್ಲಿ ಒಬ್ಬರನ್ನು ಅಭ್ಯರ್ಥಿ ಮಾಡಬೇಕೆಂದು ಎಂದು ಹೈಕಮಾಂಡ್​ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಓಲೇಕಾರ್ ಸ್ವಜನಪಕ್ಷಪಾತದಿಂದ ಕಾರ್ಯಕರ್ತರಿಗೆ ಬೇಸರ: ಹಾವೇರಿ ಅಭಿವೃದ್ಧಿ ಆಗಬೇಕು. ಓಲೇಕಾರ ಅವರ ಸ್ವಜನ ಪಕ್ಷಪಾತ ಕಾರ್ಯಕರ್ತರಿಗೆ ಬಹಳ ನೋವು ತಂದಿದೆ. ಅದರಿಂದ ಮುಂದಿನ ದಿನಗಳಲ್ಲಿ ಅಭ್ಯರ್ಥಿ ಬದಲಾವಣೆಗೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇದೇ ತಿಂಗಳು 16ರಂದು ಮತ್ತೊಂದು ಅಭಿಮಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ನೆಹರು ಓಲೇಕಾರ ಅವರ ಸ್ವಜನಪಕ್ಷಪಾತ ಹಲವಾರು ಬಾರಿ ಧ್ವನಿ ಎತ್ತಿದ್ದೇನೆ. ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುವ ಕೆಲಸವನ್ನು ಸಮಿತಿಯಿಂದ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಓಲೇಕಾರ್ ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ ಅಭಿಯಾನ ಸಮಿತಿ ಮಾಧ್ಯಮ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಹಾಗೂ ಕೆಲ ಬಿಜೆಪಿ ಕಾರ್ಯಕರ್ತರು ಐಬಿ ಸರ್ಕ್ಯೂಟ್ ಹೌಸ್‌ ಎದುರು ಜಮಾಯಿಸಿದರು.

ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್

ಅಭಿಯಾನ ಸದಸ್ಯರ ನಡುವೆ ಓಲೇಕಾರ ಬೆಂಬಲಿಗರ ತೀವ್ರ ವಾಗ್ದಾಳಿ: ಈ ವೇಳೆ ಅಭಿಯಾನ ಸಮಿತಿ ಅಧ್ಯಕ್ಷ ಮತ್ತು ಬಿಜೆಪಿ ಹಾಲು ಪ್ರಕೋಷ್ಠದ ಅಧ್ಯಕ್ಷ ಸಂತೋಷರೆಡ್ಡಿ ಅವರ ಕಾರ್​ ತಡೆದ ನೆಹರು ಓಲೇಕಾರ್ ಬೆಂಬಲಿಗರು ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿರುವ ನೀವು ಹಾವೇರಿಗೆ ಬಂದು ಈ ರೀತಿ ಅಪಪ್ರಚಾರ ಮಾಡಲು ಕಾರಣವೇನು ಎಂದು ನೆಹರು ಬೆಂಬಲಿಗರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಅಕಾಂಕ್ಷಿ ಪರಮೇಶಪ್ಪ ಮೇಗಳಮನಿ ಮತ್ತು ನೆಹರು ಓಲೇಕಾರ್ ಬೆಂಬಲಿಗರ ನಡುವೆ ಮಾತಿನ ಚಕಮಿಕಿ ನಡೆಯಿತು. ಇದರಿಂದ ಪಕ್ಷದ ಹೆಸರು ಕೆಡುತ್ತೆ ಎಂದು ನೆಹರು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷರೆಡ್ಡಿ ಅವರು, ಶಾಸಕರ ಕಾರ್ಯವೈಖರಿ ಸರಿಯಾಗಿಲ್ಲ. ಈ ಹಿನ್ನೆಲೆ ನಾನು ಈ ಆರು ಸದಸ್ಯರ ಪರ ಬೆಂಬಲ ವ್ಯಕ್ತಪಡಿಸಿದ್ದೇನೆ. ಅವರ ಪರವಾಗಿ ಮತ್ತು ನೆಹರು ಓಲೇಕಾರ್ ವಿರುದ್ಧ ಮಾತನಾಡಿದ್ದೇನೆ ಎಂದು ತಿಳಿಸಿದರು.

ಈ ಜನರ ಹಿಂದೆ ಆಟವಾಡಿಸುವವರು ಬೇರೆ ಇದ್ದಾರೆ: ಇವರು ಸ್ವತಂತ್ರವಾಗಿ ಈ ರೀತಿ ಮಾಡುತ್ತಿಲ್ಲ. ಇದರ ಹಿಂದೆ ಇದ್ದವರು ಈ ರೀತಿ ಪಿತೂರಿ ನಡೆಸುತ್ತಿದ್ದಾರೆ. ಈ ಜನರ ಹಿಂದೆ ಆಟವಾಡಿಸುವವರು ಬೇರೆ ಇದ್ದಾರೆ ಎಂದು ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.

ಹಾವೇರಿಯ ಐಬಿ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಗದ್ದಲದ ಕುರಿತಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಇವರ ಕನಸು ನನಸಾಗುವದಿಲ್ಲಾ ಈ ರೀತಿಯ ಕುತಂತ್ರಗಳನ್ನ ಕೈಬಿಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಕುತಂತ್ರ ಅವರಿಗೆ ಮುಳುವಾಗಲಿದೆ. ಶಾಸಕ ನೆಹರು ಓಲೇಕಾರ್ ಟಿಕೆಟ್ ಕೇಳುವದು ತಪ್ಪಲ್ಲ ಆದರೆ ಇನ್ನೊಬ್ಬರನ್ನ ತೆಗಳಿ ಟಿಕೆಟ್ ಕೇಳಬಾರದು ಎಂದು ಎಚ್ಚರಿಕೆ ನೀಡಿದರು.

ಅಕಾಂಕ್ಷಿಗಳು ಹೈಕಮಾಂಡ್ ಹತ್ತೀರ ಹೋಗಲಿ, ಟಿಕೆಟ್ ಕೇಳಲಿ ಅವರು ಸರ್ವೆ ಮಾಡಿಸುತ್ತಾರೆ. ಸರ್ವೆ ಮಾಡಿದಾಗ ಅವರ ಹೆಸರು ಆಯ್ಕೆಯಾದರೆ ಅವರಿಗೆ ಟಿಕೆಟ್ ಸಿಗುತ್ತೆ. ಕೆಲಸ ಮಾಡಿದವರಿಗೆ ಟೆಕೆಟ್ ನೀಡುವ ವ್ಯವಸ್ಥೆ ಪಕ್ಷದಲ್ಲಿದೆ. ಟಿಕೆಟ್ ನೀಡುವವರು ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬ ಗ್ಯಾರಂಟಿ ಏನಿದೆ ಎಂದು ಶಾಸಕರು ಪ್ರಶ್ನಿಸಿದರು. ನಾನು ಈಗಾಗಲೇ ಶಾಸಕನಾಗಿದ್ದು, ನನಗೆ ಟಿಕೆಟ್ ಸಿಗುವ ಬಗ್ಗೆ ಭರವಸೆ ಇದೆ ಎಂದು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಅಭಿವೃದ್ಧಿ ಮಾಡಿದ್ದರಿಂದಲೇ ನನಗೆ ಅಭಿವೃದ್ಧಿ ಹರಿಕಾರ ಎಂದು ಜನರು ಕರೆಯುತ್ತಾರೆ. ಈ ರೀತಿಯ ಪ್ರಯತ್ನಗಳು ಎಲ್ಲ ಕ್ಷೇತ್ರದಲ್ಲಿವೆ. ಈ ರೀತಿ ಮಾಡುವುದೇ ಕೆಲವರ ಉದ್ಯೋಗವಾಗಿದೆ. ಹೈಕಮಾಂಡ್ ಅರ್ಜಿ ಇಸಿದುಕೊಂಡು ಇವರಿಗೆ ಬುದ್ಧಿಮಾತು ಹೇಳಿ ಕಳಿಸುತ್ತಿದ್ದಾರೆ. ನನಗೆ ಅವರ ಬಗ್ಗೆ ಕೆಟ್ಟ ಅಭಿಪ್ರಾಯವಿಲ್ಲಾ, ಇವತ್ತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದವರು ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಅವರನ್ನು ಬಿಜೆಪಿಗೆ ಯಾರು ಸೇರಿಸಿಕೊಂಡಿದ್ದಾರೆ ಅನ್ನೋದು ಗೊತ್ತಿಲ್ಲಾ. ಟಿಕೆಟ್ ಅಕಾಂಕ್ಷಿಗಳು ಈ ರೀತಿ ಹಾದಿ ಬೀದಿಯಲ್ಲಿ ಹೋಗಿ ಕೇಳಿದರೆ ಟಿಕೆಟ್ ಸಿಗುವುದಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಂದು ಓಲೇಕಾರ್ ತಿಳಿಸಿದರು.

ಇದನ್ನೂಓದಿ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಸೂಚಿಸಿದ ಬಿ.ಎಸ್.ಯಡಿಯೂರಪ್ಪ

Last Updated : Feb 12, 2023, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.