ರಾಣೆಬೆನ್ನೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ನಾನೊಬ್ಬನೇ ನಾಯಕನೆಂದು ಎಲ್ಲರನ್ನು ಕಪಿಮುಷ್ಟಿಯಲ್ಲಿಟ್ಟು ಕೊಂಡಿದ್ದಾರೆ ಎಂದು ಅನರ್ಹ ಶಾಸಕ ಆರ್.ಶಂಕರ್ ವಾಗ್ದಾಳಿ ನಡೆಸಿದರು.
ಸಿದ್ದು ವಿರುದ್ದ ಹರಿಹಾಯ್ದ ಆರ್. ಶಂಕರ್: ಕಾರಣವೇನು...? ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಆಯೋಜಿಸಿದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಎಚ್.ಎಂ.ರೇವಣ್ಣರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ದುಂಬಾಲ ಬಿದ್ದಿದ್ದೆ. ಆದರೆ ಸಿದ್ದರಾಮಯ್ಯ ನಾನೊಬ್ಬನೇ ರಾಜ್ಯದ ನಾಯಕ ಎಂದು, ನಾಯಕರನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ರಾಜಕೀಯ ಮಾಡಲು ಶುರುಮಾಡಿದರು. ರಾಜ್ಯದ ಮುಖ್ಯಮಂತ್ರಿಯಾದವರು ಒಂದು ಕಡೆ ಸೋತು, ಒಂದು ಕಡೆ ಗೆದ್ದಿದ್ದಾರೆ ಎಂದರೆ ಗೊತ್ತಾಗುತ್ತದೆ ಇವರ ರಾಜಕೀಯ ಪರಿಸ್ಥಿತಿ ಯಾವ ರೀತಿ ಇದೆ ಎಂದು ವ್ಯಂಗ್ಯವಾಡಿದರು. ಎಂಟಿಬಿ ನಾಗರಾಜ್ ಹಾಗೂ ಭೈರತಿ ಬಸವರಾಜು ಸಹಾಯ ತಗೆದುಕೊಂಡು ಮುಖ್ಯಮಂತ್ರಿ ಆಗಿದ್ದರು. ಆದರೆ ಅವರಿಗೂ ಕೂಡ ಸರಿಯಾದ ಸಹಕಾರ ನೀಡಲಿಲ್ಲ. ಇಂತಹ ನೀಚ ರಾಜಕಾರಣ ಮಾಡುವುದನ್ನು ಬಿಟ್ಟು, ತಳಮಟ್ಟದ ನಾಯಕರನ್ನು ಬೆಳಸುವ ಪ್ರವೃತ್ತಿ ಬೆಳಸಿಕೊಳ್ಳಲ್ಲಿ ಎಂದು ವಾಗ್ದಾಳಿ ನಡೆಸಿದರು.