ಹಾವೇರಿ: ಲಾಕ್ಡೌನ್ ಆದೇಶವಿದ್ದರೂ ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಸವಾರರಿಗೆ ಮಹಿಳಾ ಎಎಸ್ಐ ಕಿವಿ ಹಿಂಡಿಸಿ, ಬಸ್ಕಿ ಹೊಡೆಸಿದ ಘಟನೆ ನಡೆದಿದೆ.
ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹಂಸಭಾವಿ ಪೊಲೀಸ್ ಠಾಣೆಯ ಮಹಿಳಾ ಎಎಸ್ಐ ಎಂ.ಎ.ಅಸಾದಿ ಅವರು ಚಿಕ್ಕೇರೂರು ಗ್ರಾಮದಲ್ಲಿ ಯಾವುದೇ ತುರ್ತು ಕಾರಣವಿಲ್ಲದೆ ಮನೆಯಿಂದ ಹೊರಗೆ ಬಂದಿದ್ದ ಬೈಕ್ ಸವಾರರಿಗೆ ಈ ಶಿಕ್ಷೆ ನೀಡಿ, ಉಳಿದವರಿಗೆ ಎಚ್ಚರಿಕೆ ನೀಡಿದ್ದಾರೆ.
50 ಬಸ್ಕಿ ಹೊಡೆಸಿ ಮನೆಯಿಂದ ಹೊರಗೆ ಬರದಂತೆ ಎಎಸ್ಐ ಆಸಾದಿ ಎಚ್ಚರಿಕೆ ನೀಡಿದರು. ಬಸ್ಕಿ ಹೊಡೆದು ಸುಸ್ತಾದ ಸವಾರರು ಇನ್ನೊಮ್ಮ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಹೇಳಿ ಕ್ಷಮೆ ಕೇಳಿದರು.