ಹಾನಗಲ್: ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುವಲ್ಲಿ ವಿಳಂಬ ಖಂಡಿಸಿ ಪುರಸಭೆಯ 5ನೇ ವಾರ್ಡಿನ 100ಕ್ಕೂ ಹೆಚ್ಚಿನ ಮಹಿಳೆಯರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಮಹಿಳೆಯರು, ಕೂಡಲೇ ಕಿಟ್ ವಿತರಿಸಬೇಕು. ತಾಲೂಕಿಗೆ ಬಂದ ಕಾರ್ಮಿಕ ಕಿಟ್ಗಳು ದುರುಪಯೋಗವಾಗಿವೆ. ಅಕ್ರಮವಾಗಿ ಸಂಗ್ರಹಿಸಿಟ್ಟ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.