ಹಾನಗಲ್: ವಿದ್ಯುತ್ ಸುಧಾರಣಾ ಕಾಯ್ದೆ-2020 ತಿದ್ದುಪಡಿ ವಿರೋಧಿಸಿ ಹಾನಗಲ್ ವಿದ್ಯುತ್ ಘಟಕದ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಕ್ಕೆ ವಿಸ್ತರಣೆ ಮಾಡುತ್ತಿದೆ. ಹೀಗಾಗಿ, ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆ ತಿದ್ದುಪಡಿ ತಂದರೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕೂಡಲೇ ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಹಾನಗಲ್ ವಿದ್ಯತ್ ಘಟಕದ ಎ.ಇ.ಎಸ್.ಎಚ್.ಜಿಂಗಾಡೆ ತಿಳಿಸಿದರು.