ಹಾವೇರಿ: ಕೊರೊನಾ ವೈರಸ್ ರಾದ್ಧಾಂತದಿಂದ ಬಾಗಿಲು ಹಾಕಿದ್ದ ಹಾವೇರಿಯ ಖಾಸಗಿ ಆಸ್ಪತ್ರೆಗಳು ಕಾರ್ಯಾರಂಭ ಮಾಡಿವೆ.
ಆರಂಭದಲ್ಲಿ ಖಾಸಗಿ ಆಸ್ಪತ್ರೆಗಳು ಕೊರೊನಾ ಭೀತಿಯಿಂದ ಬಾಗಿಲು ಹಾಕಿದ್ದವು. ಇತ್ತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ತುರ್ತು ಸೇವೆಗೆ ಮೀಸಲಾಗಿದ್ದವು. ಹೀಗಾಗಿ ಸಾರ್ವಜನಿಕರು ಸಾಕಷ್ಟು ತೊಂದರೆಗೊಳಗಾಗಿದ್ದರು.
ಕೃಷಿ ಸಚಿವ ಬಿ. ಸಿ. ಪಾಟೀಲ್ ಈ ಕುರಿತಂತೆ ಖಾಸಗಿ ವೈದ್ಯರಿಗೆ ಲೈಸನ್ಸ್ ರದ್ದುಪಡಿಸುವ ಎಚ್ಚರಿಕೆ ನೀಡಿದ್ದರು. ಆದರೂ ಶುರುವಿನಲ್ಲಿ ಹಿಂದೇಟು ಹಾಕಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ಇದೀಗ ಒಬ್ಬೊಬ್ಬರಂತೆ ಆಸ್ಪತ್ರೆ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.