ಹಾವೇರಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಶಕ್ತಿಯ, ಭಾವನೆಗಳ ಹಾಗೂ ರಾಷ್ಟ್ರಭಕ್ತಿಯ ಮಂದಿರ ಎಂದು ಶ್ರೀರಾಮಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಅಭಿಮಾನದಿಂದ ದೇಣಿಗೆ ನೀಡಿದ್ದಾರೆ. ಆದರೆ ಇಂತಹ ಕಾರ್ಯಕ್ಕೆ ಅಪಸ್ವರ ಎತ್ತಿರುವುದು ಮಾತ್ರ ಈ ರಾಜ್ಯದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಎಂದ ಅವರು, ಎರಡೆರಡು ಸಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಜನರ ತೆರಿಗೆಯನ್ನ ಲೂಟಿ ಹೊಡೆದಿರುವ ಕುರಿತು ವಿವರಣೆ ನೀಡುತ್ತೀರಾ?. ರಾಜ್ಯಸಭಾ ಸದಸ್ಯರನ್ನ ಕೊಂಡು ತಂದಿರಲ್ಲಾ ಅದರ ಲೆಕ್ಕ ನೀಡ್ತಿರಾ? ಎಂದು ತಿರುಗೇಟು ನೀಡಿದರು.
ನಿಮ್ಮ ರಾಜಕೀಯವೇ ಭ್ರಷ್ಟ. ಮೊದಲು ನಿಮ್ಮ ರಾಜಕೀಯದ ಕನ್ನಡಕ ತೆಗೆದು ಹೊರಗಿನ ಪ್ರಪಂಚವನ್ನು ನೋಡಿ. ಆಗ ಸಮಾಜದಲ್ಲಿರುವ ಪ್ರಾಮಾಣಿಕ ಜನರು ಹಾಗೂ ಪ್ರಾಮಾಣಿಕ ಸಂಸ್ಥೆಗಳ ಕುರಿತು ನಿಮಗೆ ತಿಳಿಯುತ್ತದೆ ಎಂದರು.
ಓದಿ: ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ: ಡಿಸಿಎಂ ಲಕ್ಷ್ಮಣ ಸವದಿ
ಆರ್ಎಸ್ಎಸ್, ವಿಹೆಚ್‌ಪಿ, ರಾಮತೀರ್ಥ ಟ್ರಸ್ಟ್‌ನಿಂದ ಒಂದೇ ಒಂದು ರೂಪಾಯಿ ಅಪವ್ಯಯವಾಗುವದಿಲ್ಲ ಎಂದ ಅವರು, ಸಮರ್ಪಣಾ ಭಾವದಿಂದ ರಾಮ ಮಂದಿರ ನಿರ್ಮಾಣ ಕಾರ್ಯದ ಅಭಿಯಾನ ನಡೆದಿದೆ. ಈ ಅಭಿಯಾನದ ವಿರುದ್ಧ ನೀವು ಮಾಡುತ್ತಿರುವ ಆಪಾದನೆ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.