ರಾಣೆಬೆನ್ನೂರು: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ (ಗುತ್ತಲ್) ಅವರ ಮೇಲೆ ವಂಚನೆ ಆರೋಪದ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಅರುಣ್ ಕುಮಾರ್ ಪೂಜಾರ ಅವರ ಲಾರಿ ಮೇಲೆ ಸಾಲವಿದ್ದರೂ ಕೂಡ ನಕಲಿ ದಾಖಲೆ ನೀಡಿ ತುಂಗಭದ್ರಾ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 15 ಲಕ್ಷ ಸಾಲ ಪಡೆದಿದ್ದರು. ಅಲ್ಲದೆ ಗಾಡಿ ಮೇಲೆ ಸಾಲವಿದ್ದರು ಮಾರಾಟ ಮಾಡಿದ್ದರು.
ಹೀಗಾಗಿ ಹಾವೇರಿ ಸಿಜೆಎಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚೋಳಮಂಡಲ ಫೈನಾನ್ಸ್ ವ್ಯವಸ್ಥಾಪಕ ಮಹಾಂತೇಶ ಹುಲ್ಲಾರ, ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.