ಹಾನಗಲ್ (ಹಾವೇರಿ): ಜಿಲ್ಲೆಯ ಹಾನಗಲ್ ಪಟ್ಟಣದ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯನ್ನು ಅಕ್ಕಿಆಲೂರಿನ ಪಿಎಫ್ಐ ಸಂಘಟನೆ ನೆರವೇರಿಸಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಭಾನುವಾರ ತಡರಾತ್ರಿ ಸಾವನ್ನಪ್ಪಿದ್ದರು. ಮೃತನ ಗಂಟಲು ಮಾದರಿ ಪರೀಕ್ಷಿಸಲಾಗಿದ್ದು, ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.
ಮೃತನ ಅಂತ್ಯಕ್ರಿಯೆಯನ್ನು ಸ್ಥಳೀಯ ಪುರಸಭೆ ಮತ್ತು ತಾಲೂಕಾಡಳಿತದ ಸಹಕಾರದೊಂದಿಗೆ ಅಕ್ಕಿಆಲೂರಿನ ಪಿಎಫ್ಐ ಸಂಘಟನೆ ಹಾನಗಲ್ ಪಟ್ಟಣದ ದರ್ಗಾದಲ್ಲಿ ನೆರವೇರಿಸಿದೆ.