ETV Bharat / state

ಹಾವೇರಿಯಲ್ಲಿ ಧುಮ್ಮಿಕ್ಕುವ ಕುಮದ್ವತಿ: ಕಣ್ತುಂಬಿಕೊಳ್ಳಲು ಪ್ರವಾಸಿಗರ ಆಗಮನ - haveri rain news

ಜಿಲ್ಲೆಯ ರಟ್ಟಿಹಳ್ಳಿ ಮಲೆನಾಡಿನ ಸೆರಗಿನಲ್ಲಿರುವ ತಾಲೂಕು. ಇಲ್ಲಿಯ ಮಾಸೂರಿನ ಮದಗದ ಕೆರೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಈ ಕೆರೆಗೆ ಮಲೆನಾಡಿನಿಂದ ಹರಿದುಬರುವ ಕುಮದ್ವತಿ ಸೇರುತ್ತಿದ್ದಂತೆ ಮೈದುಂಬಿಕೊಳ್ಳುತ್ತೆ.

people rushed to visit kumudvati falls
ಹಾಲ್ನೂರೆಯಂತೆ ಧುಮುಕುವ ಕುಮದ್ವತಿ: ನೋಡಲು ಪ್ರವಾಸಿಗರ ದಂಡೇ ಆಗಮನ!
author img

By

Published : Jul 23, 2021, 6:56 PM IST

ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಮಾಸೂರಿನ ಮದಗದ ಕೆರೆ ಮಳೆಗಾಲ ಬಂದರೆ ಸಾಕು ಮೈದುಂಬಿಕೊಳ್ಳುತ್ತೆ. ಮಲೆನಾಡಿನಲ್ಲಿ ಸುರಿಯುವ ಮಳೆಯಿಂದ ಕೆರೆಗೆ ನದಿ ಸೇರಿ ನಂತರ ಮಿನಿ ಜಲಪಾತವಾಗಿ ಹೊರಹೊಮ್ಮುತ್ತದೆ. ಸುಮಾರು 20 ಅಡಿಯಿಂದ ಧುಮುಕುವ ಕುಮದ್ವತಿ ನಿರ್ಮಿಸುವ ಮಿನಿ ಫಾಲ್ಸ್ ಪ್ರವಾಸಿಗರನ್ನು ಮುದಗೊಳಿಸುತ್ತದೆ.

ಸುತ್ತಮುತ್ತಲು ಹಸಿರು ಹೊತ್ತ ಗುಡ್ಡಗಾಡು, ಹಾಲ್ನೊರೆಯಂತೆ ಧುಮುಕುವ ಕುಮದ್ವತಿ ಅವಾಗ ಅವಾಗ ಬರುವ ಮಳೆ ಎಂಥವರನ್ನೂ ಮಂತ್ರಮುಗ್ದಗೊಳಿಸುತ್ತೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿಮಾಡಿಸಿದ ತಾಣ ಇದಾಗಿದ್ದು ಪ್ರವಾಸಿಗರೇ ದಂಡು ಹರಿದುಬರುತ್ತೆ.

ಕುಮದ್ವತಿ ಸೃಷ್ಟಿಸಿದ ಜಲಪಾತದ ನೋಟ

ರಟ್ಟಿಹಳ್ಳಿ ಮಲೆನಾಡಿನ ಸೆರಗಿನಲ್ಲಿರುವ ತಾಲೂಕು. ಇಲ್ಲಿರುವ ಮಾಸೂರಿನ ಮದಗದ ಕೆರೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಈ ಕೆರೆಗೆ ಮಲೆನಾಡಿನಿಂದ ಹರಿದುಬರುವ ಕುಮದ್ವತಿ ಸೇರುತ್ತಿದ್ದಂತೆ ಮೈದುಂಬಿಕೊಳ್ಳುತ್ತೆ. ಮಲೆನಾಡಿನಿಂದ ಹರಿದುಬರುವ ಕುಮದ್ವತಿ ಕೆರೆ ತುಂಬುತ್ತಿದ್ದಂತೆ ಮಿಲಿ ಜಲಪಾತವಾಗಿ ಹೊರಹೊಮ್ಮುತ್ತದೆ. ಸುಮಾರು 20 ಅಡಿ ಎತ್ತರಿಂದ ಧುಮುಕುವ ಮಿನಿ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತೆ. ಬಂಡೆಗಲ್ಲುಗಳಿಂದ ಬರಿಯುವ ಜಲಪಾತದ ಸೊಬಗು ಕೆಲಕಾಲ ಮೈಮರೆಯುವಂತೆ ಮಾಡುತ್ತೆ.

ಇಲ್ಲಿನ ಹಸಿರು ಹೊತ್ತ ಬೆಟ್ಟಗಳು ಕಣ್ಣಿಗೆ ಮುದನೀಡುತ್ತವೆ. ಹೊತ್ತು ಬಿಟ್ಟು ಹೊತ್ತು ಬರುವ ಮಳೆ ಮೈಮನಗಳನ್ನು ಆಕರ್ಶಿಸುತ್ತದೆ. ದಿನನಿತ್ಯದ ಜಂಜಾಟಗಳನ್ನು ಮೈಮರೆತು ಪ್ರಕೃತಿ ಅಸ್ವಾದಿಸುವ ಜೀವಗಳನ್ನ ತನ್ನ ಸೌಂದರ್ಯದಿಂದ ಖುಷಿಗೊಳಿಸುತ್ತಿದೆ.

ರಟ್ಟಿಹಳ್ಳಿ ತಾಲೂಕಿನ ಮಾಸೂರಿನಿಂದ ಮದಗದ ಕೆರೆ ಹತ್ತಿರವಾಗುತ್ತೆ. ಮದಗ ಪ್ರವೇಶಿಸುತ್ತಿದ್ದಂತೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಕಾಣಿಸುತ್ತದೆ. ಇಲ್ಲಿನ ಬೆಟ್ಟಗಳು ಚಾರಣಿಗರನ್ನು ಆಕರ್ಷಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.