ರಾಣೇಬೆನ್ನೂರು: ಸರ್ಕಾರ ನಿರ್ಮಿಸಿದ ಮನೆಗಳಿಗೆ ಬೀಗ ಹಾಕಿದ ಪಲಾನುಭವಿಗಳಿಗೆ ಮನೆಯಲ್ಲಿ ವಾಸಿಸುವಂತೆ ಚಳಗೇರಿ ಗ್ರಾಮ ಪಂಚಾಯತ್ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಈಟಿವಿ ಭಾರತ "ದಿಕ್ಕು ತಪ್ಪಿದ ಯೋಜನೆ ಉಳ್ಳವರ ಪಾಲಾದ ಚಳಗೇರಿ ನವಗ್ರಾಮ" ಎಂಬ ವಿಶೇಷ ವರದಿ ಮಾಡಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಸುಂದರ ಕಾಂಬಳೆ ಚಳಗೇರಿ ಗ್ರಾಮ ಪಂಚಾಯತ್ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದರು.
ಚಳಗೇರಿ ಗ್ರಾಮದ ಹೊರ ಭಾಗದಲ್ಲಿ ಸರ್ಕಾರ ಸುಮಾರು 272 ಮನೆಗಳು ನಿರಾಶ್ರಿತರಿಗೆ ನೀಡಲಾಗಿತ್ತು. ಆದರೆ, ಅವುಗಳ ಉಳ್ಳವರು ಪಾಲಾಗಿದ್ದು, ಮನೆಗಳಿಗೆ ಬೀಗ ಹಾಕಿ ಊರಲ್ಲಿ ವಾಸ ಮಾಡುತ್ತಿದ್ದರು. ಈಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸರ್ಕಾರ ವಾಸಿಸಲು ಮನೆ ನೀಡಿದ್ದರೂ ತಾವುಗಳು ಬೀಗ ಹಾಕಿ ಊರಲ್ಲಿ ವಾಸ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ನಿಮಗೆ ಮನೆಗಳ ಅವಶ್ಯಕತೆ ಇರುವುದಿಲ್ಲ ಎಂದು ಕಂಡು ಬಂದಿದೆ. ಈ ಕಾರಣದಿಂದ ನಿಮಗೆ 10 ದಿನದೊಳಗೆ ನವಗ್ರಾಮದಲ್ಲಿ ಬಂದು ವಾಸ ಮಾಡಬೇಕು. ಇಲ್ಲವಾದರೆ ಗ್ರಾಮ ಪಂಚಾಯತ್ ಮನೆಗಳನ್ನು ವಾಪಸ್ ಪಡೆದು ಕೊಟ್ಟಿರುವ ಹಕ್ಕು ಪತ್ರಗಳನ್ನು ಹಿಂಪಡೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.