ETV Bharat / state

ವೀರಶೈವ ಸಂಪ್ರದಾಯದಂತೆ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ: ಸಂಬಂಧಿಕರ ಆಕ್ರಂದನ - ಉಕ್ರೇನ್ ಮತ್ತು ರಷ್ಯಾ ಯುದ್ಧ

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ವೀರಶೈವ ಸಂಪ್ರದಾಯದ ವಿಧಿವಿಧಾನಗಳಂತೆ ನವೀನ್ ಅವರ ಅಂತ್ಯಸಂಸ್ಕಾರದ ಪೂಜೆ ನೆರವೇರಿಸಲಾಗಿದೆ.

ನವೀನ್ ಪಾರ್ಥಿವ ಶರೀರದ ಪೂಜೆ
ನವೀನ್ ಪಾರ್ಥಿವ ಶರೀರದ ಪೂಜೆ
author img

By

Published : Mar 21, 2022, 10:12 AM IST

ಹಾವೇರಿ: ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನ ಇಂದು ಸ್ವಗ್ರಾಮಕ್ಕೆ ಕರೆತರಲಾಗಿದೆ. ವೀರಶೈವ ಸಂಪ್ರದಾಯದ ವಿಧಿವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನ ನೆರವೇರಿಸಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್​ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕುಟುಂಬಸ್ಥರು ಪೂಜೆ ನೆರವೇರಿಸಿದರು. ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವೇಗವಾಗಿ ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಲಾಯಿತು.

ನವೀನ್ ಪಾರ್ಥಿವ ಶರೀರದ ಅಂತಿಮ ಪೂಜೆ

ಮಾರ್ಚ್ 1 ರಂದು ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ನವೀನ್ ಮೃತದೇಹ 21 ದಿನಗಳ ಬಳಿಕ ಸ್ವಗ್ರಾಮ ತಲುಪಿದೆ. ಮಗನ ಮೃತದೇಹ ಕಂಡು ತಂದೆ, ತಾಯಿ ಕಣ್ಣೀರಿಟ್ಟಿದ್ದಾರೆ. ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಧ್ಯಾಹ್ನ 2 ಗಂಟೆಗಳವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಪಾರ್ಥಿವ ಶರೀರರವನ್ನು ದಾವಣಗೆರೆಯ ಎಸ್​ಎಸ್​​ ವೈದ್ಯಕೀಯ ಕಾಲೇಜಿಗೆ ತೆಗೆದುಕೊಂಡು ಹೋಗಲಾಗುವುದು.

ಇದನ್ನೂ ಓದಿ: ಪುಟಿನ್ ಜೊತೆ ಮಾತುಕತೆಗೆ ನಾನು ಸಿದ್ಧ - ವಿಫಲವಾದರೆ 3ನೇ ವಿಶ್ವ ಯುದ್ಧಕ್ಕೆ ದಾರಿ : ಝೆಲೆನ್ಸ್ಕಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.