'ಪ್ರತಿಭೆ ಇದ್ದರೂ ಮೀಸಲಾತಿ ಸಮಸ್ಯೆಯಿಂದ ಮಗನಿಗೆ ಇಲ್ಲಿ ಓದಲು ಅವಕಾಶ ಸಿಗಲಿಲ್ಲ' - ನವೀನ್ ತಂದೆಯ ಮಾರತು .
ಬಹಳ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಈ ಬಿಕ್ಕಟ್ಟಿದೆ. ಯುದ್ಧ ಆರಂಭವಾಗಲ್ಲ ಎಂದು ಕಾಲೇಜಿನವರ ಹೇಳಿದ್ದಕ್ಕೆ ಅವನು ಅಲ್ಲೇ ಇರಬೇಕಾಯಿತು. ಕಾಲೇಜಿನವರು ಹಾಗೆ ಹೇಳಲು ಕಾರಣವೇನು ಗೊತ್ತಿಲ್ಲ ಎಂದು ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ನವೀನ್ ತಂದೆ ಶೇಖರಪ್ಪ ಹೇಳಿದರು.
ಹಾವೇರಿ: ಆತ ವರ್ಷಕೊಮ್ಮೆ ಎರಡು ತಿಂಗಳ ರಜೆ ಬರುತ್ತದೆ, ಆ ಸಮಯದಲ್ಲಿ ಮನೆಗೆ ಬರುತ್ತಿದ್ದ. ಏಕೆಂದರೆ ಬೇರೆ ಸಮಯದಲ್ಲಿ ಅಲ್ಲಿನ ಕಾಲೇಜಿನವರು ರಜೆ ಕೊಡುವುದಿಲ್ಲ ಎಂದು ನವೀನ್ನ ತಂದೆ ಶೇಖರಪ್ಪ ಹೇಳಿದರು.
ಬಹಳ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಈ ಬಿಕ್ಕಟ್ಟಿದೆ, ಯುದ್ಧ ಆರಂಭವಾಗಲ್ಲ ಎಂದು ಕಾಲೇಜಿನವರ ಹೇಳಿದ್ದಕ್ಕೆ ಅವನು ಅಲ್ಲೇ ಇರಬೇಕಾಯಿತು. ಕಾಲೇಜಿನವರು ಹಾಗೆ ಹೇಳಲು ಕಾರಣವೇನು ಗೊತ್ತಿಲ್ಲ ಎಂದರು.
ಪ್ರತಿಭೆ ಇದ್ದರೂ ಮೀಸಲಾತಿ ಸಮಸ್ಯೆಯಿಂದ ನಮ್ಮ ಮಗ ಇಲ್ಲಿ ಓದಲು ಆಗಲಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಅಲ್ಲಿಗೆ ಕಳಿಸಬೇಕಾಯಿತು. ಓದಬೇಕು ಎಂಬ ಛಲ ಅವನಲ್ಲಿತ್ತು ಎಂದು ಹೇಳಿದರು.
ಆದಷ್ಟು ಬೇಗ ಅಲ್ಲಿರುವ ಮಕ್ಕಳನ್ನು ಕರೆ ತನ್ನಿ, ನನ್ನ ಮಗನಿಗಾದಂತೆ ಯಾರಿಗೂ ಆಗುವುದು ಬೇಡ ಎಂದು ಅವರು ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಭಾರತೀಯ ಧ್ವಜ ಹಿಡಿದು ಉಕ್ರೇನ್ನಿಂದ ಸುರಕ್ಷಿತವಾಗಿ ಹೊರಬಂದ ಪಾಕ್, ಟರ್ಕಿ ವಿದ್ಯಾರ್ಥಿಗಳು!