ಹಾವೇರಿ: ಚಿತ್ರಮಂದಿರಗಳನ್ನು ಪುನಃ ತೆರೆಯುವಂತೆ ಸರ್ಕಾರ ಅನುಮತಿಸಿದೆ. ಆದರೂ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿನ ಮಾಗಾವಿ, ಮನೋಹರ್ ಮತ್ತು ಸರಸ್ವತಿ ಚಿತ್ರಮಂದಿರಗಳು ಇಂದು ಬಾಗಿಲು ತೆರೆಯಲಿಲ್ಲ.
ಚಿತ್ರ ವೀಕ್ಷಣೆಗೆ ತುದಿಗಾಲಲ್ಲಿ ನಿಲ್ಲಬೇಕಾಗಿದ್ದ ವೀಕ್ಷಕರು ಸಹ ಜಿಲ್ಲಾ ಕೇಂದ್ರದಲ್ಲಿ ಕಂಡುಬರಲಿಲ್ಲ. ನಗರದಲ್ಲಿನ ಬಹುತೇಕ ಚಿತ್ರಮಂದಿರಗಳು ಲಾಕ್ಡೌನ್ ಸಮಯದಲ್ಲಿದ್ದ ಬೀಗ ಹಾಕಿದ ಸ್ಥಿತಿಯಲ್ಲಿಯೇ ಕಂಡುಬಂದವು. ಸರ್ಕಾರದ ಅನುಮತಿಯಿದ್ದರೂ ಆರ್ಥಿಕ ನಷ್ಟದ ಭೀತಿಯಿಂದ ಥಿಯೇಟರ್ ಮಾಲೀಕರು ಮುಂದಿನ ದಿನಗಳಲ್ಲಿ ಬಾಗಿಲು ತೆರೆಯುವುದಾಗಿ ತಿಳಿಸಿದ್ದಾರೆ.