ETV Bharat / state

'ಡಾಕ್ಟರ್​ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್​ ಕಣೋ': ನವೀನ್​ ತಾಯಿಯ ಅಳಲು - ವೀರಶೈವ ಸಂಪ್ರದಾಯದಂತೆ ನೆರವೇರಿದ ನವೀನ್ ಪಾರ್ಥಿವ ಶರೀರದ ಪೂಜೆ

ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ವೀರಶೈವ ಸಂಪ್ರದಾಯದ ವಿಧಿವಿಧಾನಗಳಂತೆ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ​ಕ್ಕೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ವೇಳೆ ನವೀನ್​ ತಾಯಿ ವಿಜಯಲಕ್ಷ್ಮಿ, ಮಗನಿಗೆ ಸೆಲ್ಯೂಟ್​ ಹೊಡೆದರು.

Mother vijayalakshmi gave a salute to her son Naveen
ನವೀನ್​ಗೆ ಸೆಲ್ಯೂಟ್​ ಹೊಡೆದ ತಾಯಿ ವಿಜಯಲಕ್ಷ್ಮಿ
author img

By

Published : Mar 21, 2022, 11:43 AM IST

Updated : Mar 21, 2022, 12:04 PM IST

ಹಾವೇರಿ : ಉಕ್ರೇನ್​-ರಷ್ಯಾ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ​ ಸ್ವಗ್ರಾಮ ತಲುಪಿದ್ದು, ವೀರಶೈವ ಸಂಪ್ರದಾಯದ ವಿಧಿ - ವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ವೇಳೆ ನವೀನ್​ ತಾಯಿ ವಿಜಯಲಕ್ಷ್ಮಿ, ಮಗನಿಗೆ ಸೆಲ್ಯೂಟ್​ ಹೊಡೆದರು.

ನವೀನ್​ ನೆನೆದು ಕಣ್ಣೀರಿಟ್ಟ ಕುಟುಂಬ

ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್​ ನಿವಾಸದಲ್ಲಿ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಸೇರಿದಂತೆ ಸಂಬಂಧಿಕರು ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿದರು. ಇದೇ ವೇಳೆ, ಸಹೋದರ ಹರ್ಷ ತಾಯಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.

'ಡಾಕ್ಟರ್​ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್​ ಕಣೋ' ಎಂದು ನವೀನ್​ ತಾಯಿ ವಿಜಯಲಕ್ಷ್ಮಿಯವರು, ಮೃತ ಮಗ ನವೀನ್​ಗೆ ಎರಡು ಕೈಯಿಂದ ಸೆಲ್ಯೂಟ್ ಹೊಡೆದು ಕಣ್ಣೀರಿಟ್ಟರು.

ಇದನ್ನೂ ಓದಿ: ವೀರಶೈವ ಸಂಪ್ರದಾಯದಂತೆ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ: ಸಂಬಂಧಿಕರ ಆಕ್ರಂದನ

Last Updated : Mar 21, 2022, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.