ಹಾವೇರಿ:ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಕವನಾ ಹಿರೇಮಠ (20) ಅವರ ತಾಯಿ ಮಗಳ ಅಂಗಾಂಗ ದಾನ ಮಾಡಿ ಮಗಳ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.
ಸೆಪ್ಟೆಂಬರ್ 9 ರಂದು ಕವನಾ ಹಿರೇಮಠ ಶಿಕಾರಿಪುರದ ಗಾರ್ಮೆಂಟ್ಸ್ನಿಂದ ಹಳ್ಳೂರಿಗೆ ಬರುತ್ತಿದ್ದ ವೇಳೆ ಶಿಕಾರಿಪುರದ ಹೊನ್ನಾಳಿ ಸಂಪರ್ಕಿಸುವ ರಸ್ತೆಯ ಸೊರಟೂರು ಗ್ರಾಮದಲ್ಲಿ ಕವನಾ ಪಯಣಿಸುತ್ತಿದ್ದ ವಾಹನ ಮತ್ತು ಚಕ್ಕಡಿ ನಡುವೆ ಅಪಘಾತವಾಗಿತ್ತು.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕವನಾಳನ್ನ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಲಿಲ್ಲ, ಕವನಾ ಕೋಮಾಕ್ಕೆ ಜಾರಿದ್ದಳು.
ಮಗಳು ಬದುಕಿದರೂ ಜೀವಂತ ಶವವಾಗಿರುತ್ತಾಳೆ ಹೀಗಾಗುವುದು ಬೇಡ ಎಂದು ಕುಟುಂಬದವರೊಂದಿಗೆ ಚರ್ಚಿಸಿ ಆಕೆಯ ತಾಯಿ ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧಿರಿಸಿದ್ದಾರೆ. ಕವನಾಳ ತಾಯಿ ವಸಂತಮ್ಮ ಹಿರೇಮಠರ ಈ ನಿರ್ಧಾರಕ್ಕೆ ಸಂಬಂಧಿಕರು ಗ್ರಾಮಸ್ಥರು ವೈದ್ಯರು ಸಹಮತ ವ್ಯಕ್ತಪಡಿಸಿದರು. ಕವನಾಳ ದೇಹದಿಂದ ಚರ್ಮ, ಹೃದಯ, ಕಿಡ್ನಿ, ಕಣ್ಣು, ಲಿವರ್ ಈ ಅಂಗಾಂಗಳನ್ನ ಅವಶ್ಯಕತೆ ಇರುವ ರೋಗಿಗಳಿಗೆ ಝೀರೋ ಟ್ರಾಫಿಕ್‌ನಲ್ಲಿ ಕಳುಹಿಸಿಕೊಡಲಾಯಿತು. ನಂತರ ಕವನಾಳ ಶವಸಂಸ್ಕಾರವನ್ನು ಹಳ್ಳೂರಿನಲ್ಲಿ ನೆರವೇರಿಸಲಾಯಿತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಟಿಟಿ ಚಾಲಕನ ವೇಗಕ್ಕೆ ಬೈಕ್ ಸವಾರ ಬಲಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ