ETV Bharat / state

Monsoon 2023: ತಡವಾದ ಮುಂಗಾರು.. ಬೆಳೆಯುವ ಮುನ್ನವೇ ಕಮರುತ್ತಿವೆ ಬೀಜ - ಹಾವೇರಿ ನ್ಯೂಸ್​​

ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆ ಮಾನ್ಸೂನ್ ಮಾರುತಗಳು ಭಾರತ ಪ್ರವೇಶಕ್ಕೆ ಅಡ್ಡಿ ಉಂಟಾಗಿತ್ತು. ನೈಋತ್ಯ ಮಾನ್ಸೂನ್ ಜೂನ್ 8 ರಂದು ಕೇರಳಕ್ಕೆ ಪ್ರವೇಶಿಸಿದೆ. ಮುಂಗಾರು ಮಳೆ ತಡವಾದ ಕಾರಣ ರಾಜ್ಯದಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗುವ ಭೀತಿಯಿದೆ.

Monsoon onset delayed:  Impact on Agriculture
ಹುಟ್ಟುವ ಮುನ್ನವೇ ಕಮರಲಾರಂಭಿದ ಬಿತ್ತನೆ ಬೀಜ
author img

By

Published : Jun 10, 2023, 12:30 PM IST

Updated : Jun 10, 2023, 2:49 PM IST

ಸಂಕಷ್ಟದಲ್ಲಿ ಹಾವೇರಿ ಜಿಲ್ಲೆಯ ಅನ್ನದಾತರು

ಹಾವೇರಿ: 'ಉತ್ತರ ಕರ್ನಾಟಕದ ಹೆಬ್ಬಾಗಿಲು' ಎಂದು ಕರೆಯುವ ಹಾವೇರಿ ಜಿಲ್ಲೆ ಬಹುತೇಕ ಅರೆಮಲೆನಾಡು ಪ್ರದೇಶ. ಇಲ್ಲಿಯ ರೈತರು ಮುಂಗಾರು ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಜಿಲ್ಲೆಯ ಪ್ರತಿಶತ 10ರಷ್ಟು ರೈತರು ಪೂರ್ವ ಮುಂಗಾರು ಮಳೆಯನ್ನ ಅವಲಂಬಿಸಿದ್ದಾರೆ.

ಮುಂಗಾರು ಮಳೆ ಬರುವ ಮುನ್ನ ಪೂರ್ವ ಮಳೆಯಲ್ಲಿ ಜಮೀನು ಹದವಾಗಿಟ್ಟುಕೊಂಡು ಬಿತ್ತನೆ ಮಾಡುತ್ತಾರೆ. ಈ ರೀತಿ ಬಿತ್ತನೆ ಮಾಡಿದ ಬೀಜಗಳಿಗೆ ಮುಂಗಾರು ಮಳೆ ಆಗಮನ ಮತ್ತಷ್ಟು ಉತ್ತೇಜನ ನೀಡಿ ಉತ್ತಮ ಬೆಳೆ ಬರುತ್ತದೆ. ಅದರಂತೆ ಈ ವರ್ಷ ಸಹ ಮುಂಗಾರು ಪೂರ್ವದಲ್ಲಿ ಜಮೀನು ಹದವಾಗಿಟ್ಟುಕೊಂಡು ಮುಂಗಾರಿನ ಮುನ್ನವೇ ಗೋವಿನಜೋಳ, ಸೋಯಾಬಿನ್ ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನ ಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ.

ಬೀಜಗಳು ಸಹ ಮೊಳಕೆ ಬಂದಿವೆ. ಆದರೆ ನಿಗದಿತ ಸಮಯದಲ್ಲಿ ಮುಂಗಾರು ಮಳೆ ಬಾರದಿರುವುದು ಈ ರೀತಿ ಮೊಳಕೆಯೊಡೆದ ಬೀಜಗಳಿಗೆ ನೀರಿನಾಂಶದ ಕೊರತೆಯುಂಟಾಗಿದೆ. ಇದರಿಂದ ಬೀಜಗಳು ಅಲ್ಲಿಯೇ ಹಾಳಾಗಲಾರಂಭಿಸಿವೆ. ಪರಿಣಾಮ ಸಹಸ್ರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಗೋವಿನ ಜೋಳ ಸೋಯಾಬಿನ್ ಮತ್ತು ಹತ್ತಿ ಬೀಜ ಹುಟ್ಟುವ ಮುನ್ನವೇ ಕಮರಲಾರಂಭಿಸಿದೆ.

ಸಂಕಷ್ಟದಲ್ಲಿ ಅನ್ನದಾತರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಅವಲಂಭಿಸಿ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೇನು ಮುಂಗಾರು ಮಳೆ ಬಂತು ಎನ್ನುವಷ್ಟರಲ್ಲಿ ಚಂಡಮಾರುತ ಹಾವಳಿ ಮುಂಗಾರು ಮಳೆಯನ್ನು ವಿಳಂಬ ಮಾಡಿದೆ. ಕಳೆದ ವರ್ಷ ಅತಿಯಾದ ಮಳೆ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿತ್ತು. ಆದರೆ, ಈ ವರ್ಷ ತಡವಾದ ಮುಂಗಾರು ಮಳೆ ಮತ್ತೆ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.

Monsoon onset delayed:  Impact on Agriculture
ಹುಟ್ಟುವ ಮುನ್ನವೇ ಕಮರಲಾರಂಭಿಸಿದ ಬಿತ್ತನೆ ಬೀಜ

ಬಿತ್ತನೆ ಬೀಜ ಮಾರಾಟಗಾರರು, ಗೊಬ್ಬರ ಮಾರಾಟಗಾರರು ಸೇರಿದಂತೆ ಅಧಿಕಾರಿಗಳು ರೈತರನ್ನ ಶೋಷಣೆ ಮಾಡುತ್ತಾರೆ. ಬಿತ್ತನೆ ಬೀಜ ಮತ್ತು ಗೊಬ್ಬರ ಪ್ಯಾಕೇಟ್​‌ಗಳ ಮೇಲೆ ಇರುವ ದರವೇ ಬೇರೆ ಅವರು ಮಾರಾಟ ಮಾಡುವ ದರವೇ ಬೇರೆ. ಈ ರೀತಿ ಇರುವಾಗ ರೈತ ಹೆಚ್ಚು ಹಣ ಕೊಟ್ಟು ತಂದ ಬಿತ್ತನೆ ಬೀಜ ಮತ್ತು ಗೊಬ್ಬರ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ. ಅಲ್ಲದೇ ಮುಂಗಾರು ಮಳೆ ಬರುತ್ತಿದ್ದಂತೆ ರೈತರನ್ನ ಸುಲಿಯುವ ಈ ರೀತಿ ವ್ಯಾಪಾರಸ್ಥರ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

"ವ್ಯಾಪಾರಿಗಳು ಬಿತ್ತನೆ ಬೀಜ ಮತ್ತು ಗೊಬ್ಬರ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರಿಗೆ ಅನ್ಯಾಯವಾದರೆ ದೂರವಾಣಿ ಕರೆ ಮಾಡಿ ದೂರು ನೀಡಿ ಅಂತಾರೆ. ಆದರೆ ದೂರವಾಣಿ ಕರೆ ಮಾಡಿದರೆ ಅದಕ್ಕೆ ಯಾವ ಸ್ಪಂದನೆಯೂ ಇಲ್ಲ" ಎಂಬುವುದು ರೈತರ ದೂರು.

ಸರ್ಕಾರ ಜನ ಸಾಮಾನ್ಯರಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಆದರೆ ರೈತರಿಗೆ ಅಂತಾ ಯಾವ ಯೋಜನೆ ಜಾರಿಗೆ ತಂದಿದೆ?. ರೈತ ದೇಶಕ್ಕೆ ಅನ್ನ ನೀಡುತ್ತಾನೆ. ನಾವು ದುಡಿಯಲು ಸಿದ್ದರಿದ್ದೇವೆ. ಹಾಗಾಗಿ ಸರ್ಕಾರ ರೈತರಿಗಾಗಿ ಯಾವುದಾದರೂ ಒಳ್ಳೆಯ ಯೋಜನೆ ಜಾರಿಗೊಳಿಸಿ ಎಂದು ರೈತರು ಆಗ್ರಹಿಸಿದ್ದಾರೆ

ಇದನ್ನೂ ಓದಿ: monsoon starts..ನೈಋತ್ಯ ಮಾನ್ಸೂನ್ ಕೇರಳ ಪ್ರವೇಶ: 'ನಿಧಿ ಬೇಟೆ' ಆರಂಭಿಸಿದ ಮೀನುಗಾರರು

Last Updated : Jun 10, 2023, 2:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.