ETV Bharat / state

ನೆಹರು ವಿಚಾರವಾಗಿ ಕಾಂಗ್ರೆಸ್‌ನಿಂದ​​ ಅನಗತ್ಯ ಗೊಂದಲ ಎಂದ ಸಚಿವ ಶಿವರಾಮ್ ಹೆಬ್ಬಾರ್

ಹಾವೇರಿಯಲ್ಲಿ ಸಚಿವ ಶಿವರಾಮ್​ ಹೆಬ್ಬಾರ್ ಸ್ವಾತಂತ್ರೋತ್ಸವದ​ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾಧ್ಯಮದದ ಜತೆ ಮಾತನಾಡುತ್ತಾ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

Minister Shivaram Hebbar
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್
author img

By

Published : Aug 15, 2022, 3:59 PM IST

ಹಾವೇರಿ: ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಯಿತು. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಿಂಗರಿಸಿದ ತೆರೆದ ವಾಹನದಲ್ಲಿ ಸಂಚರಿಸಿದ ಸಚಿವರು ವಿವಿಧ ಪೊಲೀಸ್‌ ಗೌರವ ವಂದನೆ ಸ್ವೀಕರಿಸಿದರು.

ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಹೆಬ್ಬಾರ್, "ಸರ್ಕಾರದ ಜಾಹೀರಾತಿನಲ್ಲಿ ನೆಹರು ಹೆಸರು ಇಲ್ಲದಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್‌ನವರು ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ" ಎಂದರು.

"ರಾಜ್ಯಕ್ಕೆ ಮೂರನೇ ಸಿಎಂ ಬರುತ್ತಾರೆ ಅನ್ನೋದು ನಮ್ಮ ಪಕ್ಷಕ್ಕಿಂತ ಮೊದಲೇ ಅವರಿಗೆ ಗೊತ್ತಾಗುತ್ತದೆ. ಕೆಲವು ದಿನಗಳ ಕಾಲ ಸಿಎಂ ಬದಲಾವಣೆ ಗೊಂದಲ ಸೃಷ್ಟಿಸಿದ್ದರು. ಅಂತಿಮವಾಗಿ ಈ ಕೆಲಸದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಈಗ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹೆಸರು ಬಿಟ್ಟಿರುವುದನ್ನು ವಿವಾದವಾಗಿ ಮಾಡುತ್ತಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: 75ನೇ ಸ್ವಾತಂತ್ರ್ಯ ದಿನಾಚರಣೆ.. ಬೆಳಗಾವಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಗೋವಿಂದ ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.