ETV Bharat / state

ಕಾಂಗ್ರೆಸ್​​ನ ಮೇಕೆದಾಟು ಪಾದಯಾತ್ರೆ 'ಮಹಾ ನಾಟಕ': ಸಚಿವ ಬಿ.ಸಿ.ಪಾಟೀಲ್ - ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ

2013 ರಿಂದ 2018 ರವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಆ ಸಮಯದಲ್ಲಿ ಮೇಕೆದಾಟು ಬಗ್ಗೆ ಸುದ್ದಿಯೇ ಇಲ್ಲ. ಜತೆಗೆ ಪಾದಯಾತ್ರೆ ಆರಂಭಿಸಿರುವ ಡಿ.ಕೆ.ಶಿವಕುಮಾರ್ 2018-19 ರಲ್ಲಿ ನೀರಾವರಿ ಸಚಿವರಾಗಿದ್ದಾಗ ಸಹ ಮೇಕೆದಾಟು ಬಗ್ಗೆ ಚಕಾರವೆತ್ತಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.

Minister BC Patil reacts on Congress Mekedatu padyatra
ಕೃಷಿ ಸಚಿವ ಬಿ.ಸಿ.ಪಾಟೀಲ್
author img

By

Published : Jan 11, 2022, 9:23 AM IST

ಹಾವೇರಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ 'ಮಹಾ ನಾಟಕ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಡಿ.ಕೆ.ಶಿ ಸಚಿವರಾಗಿದ್ದಾಗ ಮೇಕೆದಾಟು ಬಗ್ಗೆ ಚಕಾರವೆತ್ತಿಲ್ಲ:

2013 ರಿಂದ 2018 ರವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಆ ಸಮಯದಲ್ಲಿ ಮೇಕೆದಾಟು ಬಗ್ಗೆ ಸುದ್ದಿಯೇ ಇಲ್ಲ, ಡಿಪಿಆರ್ ಸಲ್ಲಿಸಿಲ್ಲ. ಜತೆಗೆ ಪಾದಯಾತ್ರೆ ಆರಂಭಿಸಿರುವ ಡಿ.ಕೆ.ಶಿವಕುಮಾರ್ 2018-19 ರಲ್ಲಿ ನೀರಾವರಿ ಸಚಿವರಾಗಿದ್ದಾಗ ಸಹ ಮೇಕೆದಾಟು ಬಗ್ಗೆ ಚಕಾರವೆತ್ತಿಲ್ಲ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ

ಈಗ ಚುನಾವಣೆಗಳು ಬರುತ್ತಿದ್ದು, ಜನರ ಗಮನ ಸೆಳೆಯಲು ಮತ್ತು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಮುಂದೆ ತಾನು ಜನಾನುರಾಗಿ, ತಮಗೆ ದೊಡ್ಡ ಜನಪ್ರಿಯತೆ ಇದೆ ಎಂದು ತೋರಿಸಿಕೊಳ್ಳಲು ಇದೊಂದು ನಾಟಕವಾಡುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಆರೋಪಿಸಿದರು.

ಕೋವಿಡ್​​ನಂತಹ ಪರಿಸ್ಥಿತಿಯಲ್ಲಿ ಜನ ಸೇರಿಸಿ ದೊಡ್ಡ ನಾಟಕ ಮಾಡಲು ಹೊರಟಿದ್ದಾರೆ. ಈ ಸಮಯದಲ್ಲಿ ಜನರ ಆರೋಗ್ಯ ಬಹಳ ಮುಖ್ಯ. ಜನ ಹಾಳಾದರೆ ಹಾಳಾಗ್ಲಿ, ಸತ್ತರೆ ಸಾಯಲಿ ಅಂತಾ ಜನಪ್ರಿಯತೆಗಾಗಿ ಪಾದಯಾತ್ರೆ ಮಾಡುತ್ತಿರುವುದು ಮೂರ್ಖತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ತಾಕತ್ತು ಎದುರಿಸುವ ತಾಕತ್ತು ಯಾರಿಗೂ ಇಲ್ಲ!

ತಾಕತ್ತಿದ್ದರೆ, ತಾಕತ್ತಿದ್ದರೆ ಎನ್ನುವ ಡಿಕೆಶಿ ಅವರಿಗೆ ಸರ್ಕಾರದ ತಾಕತ್ತು ಎದುರಿಸುವ ಯಾವ ಶಕ್ತಿಯೂ ಇಲ್ಲ. 15 ದಿನ ಪಾದಯಾತ್ರೆ ಮಾಡಲಿ. ಈಗಾಗಲೇ ಅವರಿಗೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕೈಕೊಟ್ಟು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ತನ್ನನ್ನ ಬಂಧಿಸುತ್ತದೆ. ಆಗ ಅವರ ಮೇಲೆ ಗೂಬೆ ಕೂರಿಸಿ ಪಾದಯಾತ್ರೆ ಮುಗಿಸಬಹುದು ಎಂದು ಕೊಂಡಿದ್ದಾರೆ. ಮೇಕೆದಾಟು ವಿಚಾರ ಸರ್ವೋಚ್ಚ ನ್ಯಾಯಲದಲ್ಲಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಮೇಲೆ ಒತ್ತಡ ತರುವುದು ಕಾನೂನು ಬಾಹಿರವಾಗುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್​​ ಹೇಳಿದರು.

ಇದೇ ವೇಳೆ, ಚಿತ್ರ ನಟರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತಂತೆ ಮಾತನಾಡಿದ ಅವರು ಯಾರು ಸಹ ಹೋಗಿಲ್ಲ. ಕಲಾವಿದರನ್ನ ಎಲ್ಲ ಪಕ್ಷದವರು ಇಷ್ಟಪಡುತ್ತಾರೆ. ಅವರು ಕಲಾವಿದರಾಗಿ ಪಾಲ್ಗೊಳ್ಳುವುದು ಸರಿಯಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.