ಹಾವೇರಿ : ಹಾವೇರಿಯ ರೈಲು ನಿಲ್ದಾಣದ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿಂದು ಕಾರ್ತಿಕೋತ್ಸವ ಹಿನ್ನೆಲೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನದ ಅರ್ಚಕ ಲಕ್ಷ್ಮಣ ಆಂಜನೇಯನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ್ದರು. ಮಾರುತಿಯ ಮೂರ್ತಿಗೆ 5 ಕೆಜಿ ಗೋಡಂಬಿ ಮತ್ತು 2 ಕೆಜಿ ಬಾದಾಮಿಯಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ದೇವರನ್ನು ಡ್ರೈಫ್ರೂಟ್ಸ್ನಿಂದ ಅಲಂಕಾರ ಮಾಡಿದರೆ ಸುಂದರವಾಗಿ ಕಾಣುತ್ತದೆ. ಹಾಗಾಗಿ, ಈ ರೀತಿ ತಮ್ಮ ಭಕ್ತಿ ಅರ್ಪಿಸಿರುವುದಾಗಿ ಅರ್ಚಕ ಲಕ್ಷ್ಮಣ ತಿಳಿಸಿದರು.
ಇದನ್ನೂ ಓದಿ: ಏಕ ಶಿಲಾ ನಗರಿ 'ಮಧುಗಿರಿ' ಮಡಿಲಲ್ಲಿ ಪತ್ತೆಯಾಯ್ತು ಜಲಾಧಾರೆಯ ವೈಭವ...
ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ತಳಿರು, ತೋರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಮಾರುತಿಯ ಅಲಂಕಾರವನ್ನು ಕಣ್ತುಂಬಿಕೊಂಡರು. ವಿಶೇಷ ಅಲಂಕಾರದಲ್ಲಿ ಸುಂದರವಾಗಿ ಕಾಣುತ್ತಿದ್ದ ಮಾರುತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.