ಹಾವೇರಿ : ಲಾಕ್ಡೌನ್ ಸಡಿಲಿಕೆಯ ಮೂರನೇಯ ದಿನವಾದ ಬುಧವಾರ ಹಾವೇರಿಯಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಸಾಮಾನ್ಯ ದಿನಗಳಲ್ಲಿ ಸಂಚರಿಸುವಂತ ಜನರು ಬೈಕ್, ಕಾರುಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಲೂನ್ ಗಳು ಕಾರ್ಯಾರಂಭ ಮಾಡಿದ್ದು, ಜನರು ಕಟಿಂಗ್ ಮಾಡಿಸಿಕೊಳ್ಳಲು ಸಾಮಾಜಿಕ ಅಂತರ ಕಾಪಾಡಿಕೊಂಡು ಸರತಿಯ ಪ್ರಕಾರ ಕಟಿಂಗ್ ಮಾಡಿಸಿಕೊಂಡರು. ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಮಾಸ್ಕ್ ಮತ್ತು ಹೆಲ್ಮೆಟ್ ಹಾಕದ ಸವಾರರಿಗೆ ಸಹ ದಂಡ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು ಗ್ರಾಹಕರು ವಹಿವಾಟು ನಡೆಸಿದರು.