ETV Bharat / state

ಸರ್ಕಾರದ ಭರವಸೆ; ಬಿ.ಡಿ.ಹಿರೇಮಠ ಅಮರಣಾಂತ ಉಪವಾಸ ಅಂತ್ಯ - ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಭೂಸ್ವಾಧೀನ ವಿರೋಧಿಸಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಡಿ.ಹಿರೇಮಠ ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.

Land acquisition issue; Senior lawyer BD Hiremath hunger strike ended In Haveri district
ಸರ್ಕಾರದ ಭರವಸೆ; ಬಿ.ಡಿ.ಹಿರೇಮಠ ಅಮರಣಾಂತ ಉಪವಾಸ ಅಂತ್ಯ
author img

By

Published : Dec 17, 2020, 4:39 AM IST

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯ ಭಗತ್‌ಸಿಂಗ್ ವೃತ್ತದಲ್ಲಿ ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಡಿ.ಹಿರೇಮಠ ವಾಪಸ್ ಪಡೆದಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಸಿ.ಎಂ.ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಅವರು ನೀಡಿರುವ ಭರವಸೆ ಮೇಲೆ ವಿಶ್ವಾಸವಿಟ್ಟು ಅಮರಣಾಂತ ಉಪವಾಸ ಸತ್ಯಾಗ್ರಹ ವಾಪಸ್ ಪಡೆದಿರುವುದಾಗಿ ಬಿ.ಡಿ.ಹಿರೇಮಠ ತಿಳಿಸಿದ್ದಾರೆ.

ಸರ್ಕಾರದ ಭರವಸೆ; ಬಿ.ಡಿ.ಹಿರೇಮಠ ಅಮರಣಾಂತ ಉಪವಾಸ ಅಂತ್ಯ

ಈ ಕುರಿತಂತೆ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯನ್ನ ಮೂವತ್ತರ ಒಳಗೆ ಕರೆಯುವಂತೆ ಮನವಿ ಮಾಡಿದ್ದೇನೆ. ಆದರೆ ಹೋರಾಟ ಮಾತ್ರ ಮುಂದುವರೆಯುತ್ತೆ ಎಂದಿದ್ದಾರೆ. ಸರ್ಕಾರ ಈ ಸಂಬಂಧ ಭರವಸೆ ನೀಡಿದ್ದಕ್ಕೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾತ್ರ ವಾಪಸ್ ಪಡೆದಿದ್ದೇನೆ. ಆದರೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುವುದಾಗಿ ಹಿರೇಮಠ ತಿಳಿಸಿದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬಿ.ಡಿ.ಹಿರೇಮಠ ತಮ್ಮ ಮೇಲೆ ವಿಶ್ವಾಸವಿಟ್ಟು ಅಮರಣಾಂತ ಉಪವಾಸ ಸತ್ಯಾಗ್ರಹ ವಾಪಸ್‌ ಪಡೆದಿದ್ದಾರೆ. ಅವರ ಬೇಡಿಕೆಗಳ ಕುರಿತಂತೆ ಸಿಎಂ ಬಿಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಿಗಳು, ರೈತರ ಮತ್ತು ಬಿ.ಡಿ.ಹಿರೇಮಠರ ಸಮ್ಮುಖದಲ್ಲಿ ಸಭೆ ಕರೆದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೇನೆ. ಅದರಂತೆ ಬಿ.ಡಿ.ಹಿರೇಮಠ ಅಮರಣಾಂತ ಉಪವಾಸ ಹಿಂಪಡೆದಿರುವುದಕ್ಕೆ ಧನ್ಯವಾದ ಅರ್ಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.