ಹಾವೇರಿ: ಅತ್ತಿಗೆಯನ್ನು ಹೊಡೆದು ಕೊಲೆ ಮಾಡಿ ಬಳಿಕ ನಾದಿನಿ ನೇಣಿಗೆ ಶರಣಾದ ಘಟನೆ ಶಿಗ್ಗಾವಿಯ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಜಯಶ್ರೀ ಪಾಟೀಲ (66) ಕೊಲೆಯಾದ ಅತ್ತಿಗೆಯಾಗಿದ್ದು, ಮಂಜುಳಾ ಪಾಟೀಲ (50) ಕೊಲೆ ಮಾಡಿ ನೇಣಿಗೆ ಶರಣಾಗಿರುವ ನಾದಿನಿ.
ಮಂಜುಳಾ ಮನೆಯಲ್ಲಿದ್ದ ಸುತ್ತಿಗೆಯಿಂದ ಜಯಶ್ರಿ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. 'ಪೊಲೀಸರೊಂದಿಗೆ ನಾಲ್ಕು ಜನ ಊರವರನ್ನು ಕರೆದುಕೊಂಡು ಬಾಗಿಲು ಒಡೆದು ಒಳಗೆ ಬನ್ನಿರಿ' ಅಂತ ಬರೆದ ಹಾಳೆಯನ್ನು ಬಾಗಿಲಿಗೆ ನೇತು ಹಾಕಿ ಮಂಜುಳಾ ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.
![lady committed suicide after killing her relative](https://etvbharatimages.akamaized.net/etvbharat/prod-images/13509545_xzcbvfsdvhdvf.jpg)
ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರದ ಬಳಿಕ ಕಂಠೀರವ ಸ್ಟುಡಿಯೋ ಬಳಿ ಕರಗಿದ ಜನದಟ್ಟಣೆ
ಸ್ಥಳಕ್ಕೆ ಶಿಗ್ಗಾಂವಿ ಡಿವೈಎಸ್ಪಿ ಕಲ್ಲೇಶಪ್ಪ ಹಾಗೂ ಸಿಪಿಐ ಬಸವರಾಜ ಹಲಬಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.