ETV Bharat / state

ಕಾರ್ಮಿಕರಿಗೆ ಕಿಟ್​ ಕೊರತೆ.. ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಗದ್ದಲ

author img

By

Published : Mar 29, 2023, 5:02 PM IST

ಹಾವೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ, ಅವರ ಮಕ್ಕಳಿಗೆ ನೀಡಲು ತಂದಿದ್ದ ಕಿಟ್​ಗಳು ಕೊರತೆಯಾಗಿದ್ದರಿಂದ ಕೆಲ ಕಾಲ ಗದ್ದಲ ಹಾಗೂ ಗಲಾಟೆ ನಡೆಯಿತು.

ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಗದ್ದಲ
ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಗದ್ದಲ
ಕಿಟ್ ಕೊರತೆ ಬಗ್ಗೆ ವಿದ್ಯಾರ್ಥಿ ಪ್ರಶಾಂತ್ ಒಡೆಯರ್ ಅವರು ಮಾತನಾಡಿದರು

ಹಾವೇರಿ: ನಗರದ ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಬುಧವಾರ ಅಕ್ಷರಶಃ ಗೊಂದಲದ ಗೂಡಾಗಿತ್ತು. ಈ ಗೊಂದಲಕ್ಕೆ ಕಾರಣ ಕಾರ್ಮಿಕ ಇಲಾಖೆ ಕಾರ್ಮಿಕರಿಗೆ, ಕಾರ್ಮಿಕರ ಮಕ್ಕಳಿಗೆ ನೀಡಲು ತಂದಿದ್ದ ಕಿಟ್‌ಗಳು. ಹೌದು ಹಾವೇರಿ ಜಿಲ್ಲೆಯಲ್ಲಿರುವ ಕಾರ್ಮಿಕರು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾರ್ಮಿಕ ಇಲಾಖೆ ಸುಮಾರು 2500 ರೂಪಾಯಿಯ ಮೌಲ್ಯದ ಕಿಟ್ ನೀಡಲು ಮುಂದಾಗಿತ್ತು. ವಿಚಿತ್ರ ಅಂದರೆ ಹಾವೇರಿ ಜಿಲ್ಲೆಯಲ್ಲಿ ಎರಡು ಲಕ್ಷ 50 ಸಾವಿರ ಕಾರ್ಮಿಕರಿದ್ದರೆ ಅದರಲ್ಲಿ ಕಿಟ್ ಬಂದಿರುವುದು ಕೇವಲ ಎರಡು ಸಾವಿರ ಮಾತ್ರ.

ಹೀಗಾಗಿ, ಹಾವೇರಿಯಲ್ಲಿ ಉಳಿದ ತಾಲೂಕುಗಳಿಗೆ ವಿತರಿಸಿದ ನಂತರ ಹಾವೇರಿ ತಾಲೂಕಿಗೆ ಉಳಿದಿದ್ದು ಕೇವಲ 250 ಕಿಟ್ ಮಾತ್ರ. ಆದರೆ ಕಿಟ್ ಪಡೆಯಲು ಕಾರ್ಮಿಕರು ಕಾರ್ಮಿಕರ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಸಮರ್ಪಕ ಕಿಟ್ ಇಲ್ಲದ ಕಾರಣ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಿಟ್ ವಿತರಣೆ ಮಾಡಲಿಲ್ಲ.

ಇದರಿಂದಾಗಿ ತೀವ್ರ ಹತಾಶರಾದ ಕಾರ್ಮಿಕರು, ಕಾರ್ಮಿಕರ ಮಕ್ಕಳು ಅಧಿಕಾರಿಗಳ ವಿರುದ್ಧ ಗರಂ ಆದರು. ಸಿಕ್ಕ ಸಿಕ್ಕ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಕಿಟ್ ಸ್ವಲ್ಪ ಇರುವ ಕಾರಣ ಸ್ವಲ್ಪ ಜನರಿಗೆ ಮಾತ್ರ ನೀಡಬೇಕಾಗಿತ್ತು. ಬದಲಿಗೆ ಇಲಾಖೆಯ ಎಲ್ಲ ಕಾರ್ಮಿಕರು ಕಾರ್ಮಿಕರ ಮಕ್ಕಳಿಗೆ ಕಿಟ್ ಬಿಡುಗಡೆಯಾಗಿವೆ. ಅವುಗಳನ್ನ ತೆಗೆದುಕೊಂಡು ಹೋಗಲು ಆಗಮಿಸುವಂತೆ ಎಲ್ಲ ಕಾರ್ಮಿಕರಿಗೆ ಸಂದೇಶ ಏಕೆ ಕಳಿಸಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ ಕೆಲವರು ಮುಂಜಾನೆ ನಾಲ್ಕು ಗಂಟೆಯಲ್ಲಿ ಎಪಿಎಂಸಿ ಕಚೇರಿಗೆ ಬಂದಿದ್ದೇನೆ. ಆದರೂ ಸಹ ನನಗೆ ಟಿಕೆಟ್ ನೀಡಿಲ್ಲಾ ಎಂದು ದೂರಿದರು.

ನಾವು ಕಾರ್ಮಿಕರು ದಿನನಿತ್ಯ ಕೂಲಿಯಲ್ಲಿ ಜೀವನ ಕಳೆಯುತ್ತೇವೆ. ಇಂತಹದರಲ್ಲಿ ಹಾವೇರಿಗೆ ಬನ್ನಿ ಅಂದಿದ್ದಕ್ಕೆ ಇವತ್ತಿನ ಕೂಲಿ ಬಿಟ್ಟು ಬಸ್ ಚಾರ್ಜ್ ನೀಡಿ ಹಾವೇರಿಗೆ ಬಂದಿದ್ದೇವೆ. ನಾವು ಖರ್ಚು ಮಾಡಿದ ಹಣ ಯಾರು ನೀಡುತ್ತಾರೆ? ಎಂದು ಕಾರ್ಮಿಕರು ಪ್ರಶ್ನಿಸಿದರು. ನಾವು ನಮ್ಮ ಕೂಲಿ ನಾಲಿ ಕೆಲಸ ಬಿಟ್ಟು ನೂರಾರು ರೂಪಾಯಿ ಬಸ್ ಚಾರ್ಜ್ ನೀಡಿ ಕಿಟ್ ತೆಗೆದುಕೊಂಡು ಹೋಗಲು ಬಂದಿದ್ದೇವೆ. ಆದರೆ ಇಲ್ಲಿ ಬಂದು ನೋಡಿದರೇ ಕಿಟ್‌ಗಳೇ ಇಲ್ಲ. ನಾವು ಕಿಟ್ ನೀಡುವ ತನಕ ವಾಪಸ್ ಊರಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ಸಮರ್ಪಕ ಕಾರ್ಮಿಕರ ಕಾರ್ಡ್​ ಇದ್ದರೆ ಮಾತ್ರ ಕಿಟ್​ ಎಂದ ಸಿಬ್ಬಂದಿ: ಕಾರ್ಮಿಕ ಇಲಾಖೆ ಅಧಿಕಾರಿಯನ್ನ ವಾಪಾಸ್​ ತೆರಳದಂತೆ ಕಾರ್ಮಿಕರು ಕೂಡಿಹಾಕಿದರು. ಈ ಮಧ್ಯೆ ಕಾರ್ಮಿಕ ಇಲಾಖೆಯ ಸಿಬ್ಬಂದಿಯೊಬ್ಬರು ಇಲ್ಲಿ ಬಂದಿರುವವರಲ್ಲಿ ಎಲ್ಲರೂ ಕಾರ್ಮಿಕರಲ್ಲಾ. ನಿಜವಾದ ಕಾರ್ಮಿಕರಿಗೆ ನಾವು ಕಿಟ್ ನೀಡುತ್ತೇವೆ. ನಿಮ್ಮಲ್ಲಿ ಸಮರ್ಪಕ ಕಾರ್ಮಿಕರ ಕಾರ್ಡ್ ಇಲ್ಲದಿದ್ದರೇ ಎಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ವಿದ್ಯಾರ್ಥಿಗಳು: ಇದು ಕಾರ್ಮಿಕರನ್ನ ತೀವ್ರ ಆಕ್ರೋಶಗೊಳಿಸಿತು. ಆ ಅಧಿಕಾರಿ ಬಂದು ತಮಗೆ ತಪ್ಪಾಯಿತು ಎಂದು ಕೇಳುವವರೆಗೂ ಬಿಡುವುದಿಲ್ಲ ಎಂದು ಕಾರ್ಮಿಕರು ಪಟ್ಟುಹಿಡಿದರು. ಅಧಿಕಾರಿಗಳು ಸಾಕಷ್ಟು ತಿಳಿಹೇಳಿದರೂ ಸಹ ಕಾರ್ಮಿಕರು, ವಿದ್ಯಾರ್ಥಿಗಳು ಸ್ಥಳದಿಂದ ಕದಲಿಲ್ಲ. ಈ ಮಧ್ಯೆ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಅಧಿಕಾರಿಗಳನ್ನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಶಾಲಾ ಕಾಲೇಜ್ ತೊರೆದು ಬಂದಿದ್ದ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ತಾಲೂಕಿಗೆ 250 ಕಿಟ್​ ಮಾತ್ರ ಎಂದ ಅಧಿಕಾರಿ : ಈ ಬಗ್ಗೆ ವಿದ್ಯಾರ್ಥಿ ಪ್ರಶಾಂತ ಒಡೆಯರ್ ಮಾತನಾಡಿ, ನಾವು ನಿನ್ನೆಯೂ ಬಂದಿದ್ದೆವು. ಆದರೆ ಅವರು ಪಾಳೆ(ಸಾಲು) ಹಚ್ಚಿ ಅಂತ ಹೇಳಿದ್ರು. ನಾವು ಪಾಳೆ ಹಚ್ಚಿದ್ವಿ. ಸಂಜೆ ಐದು ಗಂಟೆವರೆಗೆ ನಿಂತಿದ್ದೆವು. ಅವರು ಕೊಡಲ್ಲ ಎಂದು ಬಂದ್​ ಮಾಡಿಕೊಂಡು ಹೋದ್ರು. ಮತ್ತೆ ಇವತ್ತು ಬಂದಿದ್ದೇವೆ. ಆದರೆ ಅವರು ಇಲ್ಲ ಒಂದು ತಾಲೂಕಿಗೆ ಕೇವಲ 250 ಕಿಟ್ ಮಾತ್ರ ಬಂದಿವೆ ಎಂದ್ರು. ಆಗ ನಾನು ಒಂದು ತಾಲೂಕಿಗೆ ಕೇವಲ 250 ಮಂದಿ ಮಾತ್ರ ಇದ್ದಾರೆಯೇ? ಎಂದು ಕೇಳಿದೆ. ಅವರು ನಮಗೆ ಅದು ಗೊತ್ತಿಲ್ಲ ಅಂದ್ರು. ನಾನದಕ್ಕೆ ಒಬ್ಬರಿಗೆ ಕೊಟ್ಟು, ಇನ್ನೊಬ್ಬರಿಗೆ ಕೊಟ್ಟಿಲ್ಲ ಅಂದ್ರೆ ಹೇಗ್ರಿ. ಎಲ್ಲ ಕಾರ್ಮಿಕರಿಗೆ ಮುಟ್ಟಬೇಕು ಎಂದೆ. ಆದರೆ ಅವರು ಒಂದು ತಾಲೂಕಿಗೆ 250 ಅಷ್ಟೇ ಕಿಟ್​ ಬಿಟ್ಟಿದ್ದಾರೆ ಎಂದು ಅಳಲನ್ನು ತೋಡಿಕೊಂಡರು.

ಮೊದಲೇ ಮಾಹಿತಿ ನೀಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ-ಮಾಲತೇಶ್​: 'ನಮ್ಮ ಜಿಲ್ಲಾ ಕಾರ್ಮಿಕ ಲೇಬರ್ ಆಫಿಸರ್ ಮೊನ್ನೆ ಪ್ರಕಟಣೆ ಹೊರಡಿಸಿದ್ದರು. 9 ಹಾಗೂ 12 ನೇ ತರಗತಿ ಮಕ್ಕಳಿಗೆ ಶಾಲಾ ಕಿಟ್​ ಕೊಡುತ್ತೇವೆ ಎಂದು. ಅದು ವಾಟ್ಸಾಪ್ ಮೂಲಕ ಹರಡಿತು. ನಂತರ ಅದನ್ನು ಗಮನಿಸಿ ಸ್ಥಳಕ್ಕೆ ಜನ ಬಂದಾಗ ಅವರು ಉತ್ತರ ಕೊಡುವುದು ಏನೆಂದರೆ, ತಾಲೂಕಿಗೆ 250 ಕಿಟ್​ ಎಂದಿದ್ದಾರೆ. ಅವರು ಮೊದಲೇ ಅಂಕಿ ಸಂಖ್ಯೆ ತಿಳಿಸಿದ್ದರೆ ಆ ಮೂಲಕ ಅವರೇ ಕರೆಕ್ಟಾಗಿ ಮೈಂಟೇನ್ ಮಾಡಬಹುದಿತ್ತು. ಬೆಳಗ್ಗೆ ನಾಲ್ಕುವರೆಗೆ ಒಬ್ಬರು ಎಕ್ಸಿಕ್ಯೂಟಿವ್ ಹಾಗೂ ಇನ್ನೊಬ್ಬರು ಒಂದು ಟಾಟಾ ಏಸ್​ನಲ್ಲಿ ಹೇರಿಕೊಂಡು ಕಿಟ್​ ತೆಗೆದುಕೊಂಡು ಹೋಗಿದ್ದಾರೆ. ಮತ್ತೆ ಎರಡು ಮೂರು ಮಂದಿಗೆ ಆ ಟೈಮ್​ನಲ್ಲೇ ಕೊಟ್ಟಿದ್ದಾರೆ. ಒಬ್ಬ ತಾಯಿ ಕೇಳಿದ್ರೆ ನಿನಗೆ ಕೊಡಂಗಿಲ್ಲ ಎಂದು ದೂಡಿ ಹೋಗಿದ್ದಾರೆ. ಈ ಸಮಸ್ಯೆ ಬಗೆಹರಿಯಬೇಕಾದ್ರೆ ಡಿಸಿ, ಸಿಎಂ ಹಾಗೂ ಸಂಬಂಧಪಟ್ಟ ಸಚಿವರು ಇಲ್ಲಿಗೆ ಬರಬೇಕು' ಎಂದು ಪೋಷಕ ಮಾಲತೇಶ ಅವರು ಒತ್ತಾಯಿಸಿದರು.

ಕಿಟ್ ಪೂರೈಕೆ ಕಡಿಮೆಯಾಗಿದ್ದೆ ಗೊಂದಲಕ್ಕೆ ಕಾರಣ- ಮಹೇಶ್​: ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಇಲಾಖೆಯ ಉಪನಿರ್ದೇಶಕ ಮಹೇಶ್, ಕಿಟ್ ಪೂರೈಕೆ ಕಡಿಮೆಯಾಗಿದ್ದೆ ಈ ಗೊಂದಲಕ್ಕೆ ಕಾರಣ ಎಂದು ತಿಳಿಸಿದರು. ಈಗ ಇರುವ ಕಿಟ್ ವಿತರಿಸಿ ಉಳಿದ ಕಾರ್ಮಿಕರು ಮತ್ತು ಕಾರ್ಮಿಕರ ಮಕ್ಕಳಿಂದ ಕಾರ್ಮಿಕರ ಹೆಸರು ಬರೆದು ಮೇಲಾಧಿಕಾರಿಗಳಿಗೆ ಕಳಿಸಿಕೊಡುತ್ತೇವೆ. ಅಲ್ಲಿಂದ ಕಿಟ್ ಬಂದ ನಂತರ ಎಲ್ಲರಿಗೂ ವಿತರಿಸುವುದಾಗಿ ತಿಳಿಸಿದರು.

ಎಪಿಎಂಸಿ ಕಚೇರಿಯ ಆವರಣದಲ್ಲಿ ಗದ್ದಲ: ಈ ಮಧ್ಯೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಎಪಿಎಂಸಿ ಕಚೇರಿಯಲ್ಲಿದ್ದ ಕಿಟ್‌ಗಳನ್ನ ಅಕ್ರಮವಾಗಿ ಸಾಗಿಸಿದ್ದಾರೆ ಎಂದು ಕೆಲ ಕಾರ್ಮಿಕರು ಆರೋಪಿಸಿದರು. ಎಪಿಎಂಸಿ ಕಚೇರಿಯ ಆವರಣದಲ್ಲಿ ಗದ್ದಲ ಪ್ರತಿಭಟನೆಗಳು ನಡೆಯುತ್ತಿದ್ದಂತೆ ಪೊಲೀಸ್ ಇಲಾಖೆಯ ಸಹಾಯ ಕೇಳಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದರು. ಆದರೂ ಸಹ ಎಪಿಎಂಸಿ ಕಚೇರಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ : ಒಳ ಮೀಸಲಾತಿ: ಮುಂದುವರೆದ ಬಂಜಾರರ ಹೋರಾಟ; ನಾರಾಯಣಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.