ರಾಣೆಬೆನ್ನೂರ: ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರೋದ್ಯಮದ ಸ್ಥಿತಿ ಗತಿ ವಿಚಾರ ಸಂಕೀರ್ಣ ಕುರಿತು ನಟಿ ತಾರಾ ಅನುರಾಧ ಮಾತನಾಡಿದರು.
ಕನ್ನಡ ಚಲನಚಿತ್ರಗಳು ಹೊರ ರಾಜ್ಯದ ಸಿನಿಮಾಗಳ ನಡುವೆ ಕೊಂಚ ಹಿಂಜರಿತ ಕಾಣುತ್ತಿವೆ. ಇಂತಹ ಸಮಯದಲ್ಲಿ ನಾವು ಚಿತ್ರೋದ್ಯಮವನ್ನು ಬೆಳೆಸುವ ಕಾರ್ಯ ಮಾಡಬೇಕಿದೆ. ಚಿತ್ರರಂಗವು ಸಮಗ್ರ ಕಲೆಯನ್ನು ತನ್ನಲ್ಲಿ ಲೀನವಾಗಿಸಿಕೊಂಡಿದೆ. ಸಂಗೀತ, ನೃತ್ಯ, ಕಲೆ, ಸಾಹಿತ್ಯ, ಹಾಡು ಎಲ್ಲದಕ್ಕೂ ಪ್ರಾಮುಖ್ಯತೆ ನೀಡಿದೆ ಎಂದರು.
ಚಲನಚಿತ್ರೋದ್ಯಮ ಮಂಡಳಿ ಅಧ್ಯಕ್ಷ ಸುನೀಲ ಪುರಾಣಿಕ ಮಾತನಾಡಿ, ಚಲನಚಿತ್ರ ಉದ್ಯಮ ಒಂದು ರೀತಿಯ ಮೈದಾನವಾಗಿದೆ. ಇಲ್ಲಿ ಬೆಳೆ ಬೆಳೆಯಬಹುದು, ಕಸವನ್ನೂ ಬೆಳೆಯಬಹುದು. ಆದರೆ ನಾವು ಏನು ಬೆಳೆಯುತ್ತವೆ ಎಂಬದು ಪ್ರಮುಖ ವಿಷಯವಾಗಿದೆ ಎಂದರು.