ETV Bharat / state

ಕಸದ ತೊಟ್ಟಿಯಂತಾಗಿದ್ದ ಕಬ್ಬೂರು ಕೆರೆ.. ಗ್ರಾಮಸ್ಥರು, ನರೇಗಾದಿಂದ ಬಂತು ಜೀವಕಳೆ - ಕೆರೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಕರಬಸಪ್ಪ

ಹಾವೇರಿ ತಾಲೂಕಿನ ಕಬ್ಬೂರು ಜಿಲ್ಲೆಯಲ್ಲಿ ಕಸ ಕಡ್ಡಿಗಳಿಂದ ತುಂಬಿ ಹೋಗಿದ್ದ ಕೆರೆಯನ್ನು ಗ್ರಾಮಸ್ಥರು, ಸ್ಥಳೀಯ ಸಂಘ ಸಂಸ್ಥೆ ಹಾಗೂ ನರೇಗಾ ಯೋಜನೆಯಿಂದ ಜೀವಕಳೆ ಬಂದಿದೆ.

ಕಬ್ಬೂರಿನ ಕೆರೆ
ಕಬ್ಬೂರಿನ ಕೆರೆ
author img

By

Published : Apr 5, 2023, 3:53 PM IST

ಗ್ರಾಮ ಪಂಚಾಯತ್ ಪಿಡಿಓ ಮೌಲಾಸಾಬ್ ಮಾತನಾಡಿದರು

ಹಾವೇರಿ : ತಾಲೂಕಿನ ಕಬ್ಬೂರು ಮಧ್ಯಮಗಾತ್ರದ ಗ್ರಾಮಗಳಲ್ಲಿ ಒಂದು. ಕಬ್ಬೂರು ರಾಜಕೀಯವಾಗಿ ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರೆ ಕಂದಾಯ ಇಲಾಖೆ ಪ್ರಕಾರ, ಹಾವೇರಿ ತಾಲೂಕಿಗೆ ಸೇರುತ್ತೆ. ಕಬ್ಬೂರಿನ ಹೊಲಗಟ್ಟಿ ಕೆರೆ ಗ್ರಾಮ ಕಸದ ತೊಟ್ಟಿಯಾಗಿತ್ತು. ಇಲ್ಲಿ ಗ್ರಾಮದ ಎಲ್ಲ ಮಲಿನವಾದ ವಸ್ತುಗಳನ್ನು ಹಾಕಲಾಗುತ್ತಿತ್ತು. ಅಕ್ಕಪಕ್ಕದಲ್ಲಿರುವ ಚಿಕನ್ ಅಂಗಡಿಗಳ ತ್ಯಾಜ್ಯ ಮತ್ತು ಸಂತೆಯಲ್ಲಿ ಉಳಿದ ತ್ಯಾಜ್ಯವನ್ನು ತಂದು ಈ ಕೆರೆಯಲ್ಲಿ ಸುರಿಯಲಾಗುತ್ತಿತ್ತು. ಇದರಿಂದಾಗಿ ಕೆರೆಯ ಪಕ್ಕದಲ್ಲಿ ಬಂದರೆ ಸಾಕು ದುರ್ವಾಸನೆ ಬೀರುತ್ತಿತ್ತು. ಇಲ್ಲಿಂದ ಯಾವಾಗ ದೂರ ಹೋಗುತ್ತೇವೆ ಎಂಬ ಭಾವನೆ ಬರುತ್ತಿತ್ತು. ಆದರೆ ಇದೀಗ ಕೆರೆಯ ಚಿತ್ರಣವೇ ಬದಲಾಗಿದೆ.

ಶುಭ್ರವಾದ ಕೆರೆ ನಿರ್ಮಾಣ: 70 ವರ್ಷದ ಈ ಕೆರೆ ಎರಡು ಎಕರೆ ವಿಸ್ತೀರ್ಣ ಹೊಂದಿದ್ದು, ಮಲ ಮೂತ್ರಕ್ಕೆ ಮೀಸಲು ಎನ್ನುವಂತಿತ್ತು. ಕೆರೆಯ ಅಂಗಳದಲ್ಲಿ ಕಸ ಕಡ್ಡಿಗಳು ಬೆಳೆದು ನೋಡಲು ಸಹ ಕಸದ ತೊಟ್ಟಿಯಂತೆ ಕಾಣುತ್ತಿತ್ತು. ಆದರೆ ಈ ಕೆರೆಗೆ ಧರ್ಮಸ್ಥಳ ಕೆರೆ ಅಭಿವೃದ್ದಿ ಸಂಘದವರು ನೋಡಿದಾಗ ಕೆರೆಯ ಚಿತ್ರಣವೇ ಬದಲಾಯಿತು. ಗ್ರಾಮಪಂಚಾಯತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗ್ರಾಮಸ್ಥರ ಸಹಕಾರದಿಂದ ಈ ಕೆರೆ ಇದೀಗ ದೊಡ್ಡದಾದ ಈಜುಕೊಳದಂತೆ ಕಾಣುತ್ತಿದೆ. ಅಷ್ಟು ಶುಭ್ರವಾಗಿ ಕೆರೆ ನಿರ್ಮಿಸಲಾಗಿದೆ.

ಕಬ್ಬೂರಿನ ಕೆರೆ
ಕಬ್ಬೂರಿನ ಕೆರೆ

ಕೆರೆಯ ಮಣ್ಣಿನಿಂದ ರೈತರ ಜಮೀನಿಗೆ ಅನುಕೂಲ: ಗ್ರಾಮ ಪಂಚಾಯತ್ ಸದಸ್ಯರ ಅಧ್ಯಕ್ಷತೆಯಲ್ಲಿ ಕೆರೆ ಅಭಿವೃದ್ಧಿ ಸಮಿತಿ ಮಾಡಿಕೊಂಡು ಇಲ್ಲಿಯ ಗ್ರಾಮಸ್ಥರು ಕೆರೆಯನ್ನು ಅಭಿವೃದ್ಧಿಗೆ ಕೈಜೋಡಿಸಿದ್ದರಿಂದ ಈ ಕೆರೆ ಸುತ್ತಮುತ್ತಲ ಗ್ರಾಮಗಳ ಆಕರ್ಷಣೆಯ ಕೇಂದ್ರವಾಗಿದೆ. ರಾಜ್ಯ ಕೇಂದ್ರ ಸರ್ಕಾರದಲ್ಲಿ ಕಬ್ಬೂರಿಗೆ ಪ್ರಶಸ್ತಿ ಗರಿಮೆಯನ್ನ ಈ ಕೆರೆ ತಂದುಕೊಟ್ಟಿದೆ. ದೊಡ್ಡ ಕಸದತೊಟ್ಟಿಯಾಗಿದ್ದ ಕೆರೆಯ ಆವರಣದಲ್ಲಿದ್ದ ಮಲೀನವಸ್ತುಗಳನ್ನ ಗ್ರಾಮ ಪಂಚಾಯತ್ ಒಂದು ಲಕ್ಷ 25 ಸಾವಿರ ರೂಪಾಯಿ ಖರ್ಚು ಮಾಡಿ ಕೆರೆಯಿಂದ ಬೇರೆ ಕಡೆ ಸಾಗಿಸಿತು. ನಂತರ ಬಂದ ಧರ್ಮಸ್ಥಳದ ಸಹಾಯಧನದಿಂದ ರೈತರು ಕೆರೆಯಲ್ಲಿ ಸುಮಾರು ನಾಲ್ಕು ಸಾವಿರ ನಾಲ್ಕು ನೂರು ಟ್ರಾಕ್ಟರ್‌ನಷ್ಟು ಹೂಳು ತೆಗೆದರು. ಇದರಿಂದ ಕೆರೆಯು ಆಳವಾಯಿತಲ್ಲದೆ ಕೆರೆಯ ಮಣ್ಣು ರೈತರ ಜಮೀನುಗಳಿಗೆ ಫಲವತ್ತಾದ ಮಣ್ಣಾಗಿ ಅವರ ಬೆಳೆಗಳು ಸಹ ಸಮೃದ್ಧಿಯಿಂದ ಬಂದಿವೆ.

ವಾಯುವಿಹಾರ ಮಾಡಲು ಪಾದಚಾರಿ ಮಾರ್ಗ: ಇತ್ತ ಧರ್ಮಸ್ಥಳದ ಸಹಾಯಧನದಿಂದ ಹೂಳು ತೆಗೆಯುತ್ತಿದ್ದಂತೆ ಗ್ರಾಮ ಪಂಚಾಯತ್ ಅಮೃತ ಸರೋವರ್ ಯೋಜನೆಯಲ್ಲಿ ನರೇಗಾ ಕಾರ್ಮಿಕರಿಂದ ಕೆರೆಯ ಅಭಿವೃದ್ಧಿಗೆ ಮುಂದಾಯಿತು. ಸುಮಾರು 29 ಲಕ್ಷ ರೂಪಾಯಿ ಅನುದಾನದಲ್ಲಿ ಎರಡು ಸಾವಿರ 600 ಮಾನವ ದಿನಗಳನ್ನು ಸೃಷ್ಟಿಸಿ ಕೆರೆಯ ಚಿತ್ರಣವನ್ನ ಗ್ರಾಮ ಪಂಚಾಯತ್ ಬದಲಾಯಿಸಿದೆ. ಕೆರೆಗೆ ಕಲ್ಲುಪಿಂಚ್, ತಡೆಗೋಡೆ, ಕಲ್ಲುವಾರ್ಡ್ ನಿರ್ಮಿಸಲಾಗಿದೆ. ವಾಯುವಿಹಾರ ಮಾಡಲು ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಅದಕ್ಕೆ ತಂತಿಬೇಲಿ ಹಾಕಲಾಗಿದೆ.

ಈಜುಕೊಳದಂತಾಗಿರುವ ಕೆರೆ
ಈಜುಕೊಳದಂತಾಗಿರುವ ಕೆರೆ

ಬಟ್ಟೆ ತೊಳೆಯುವುದಕ್ಕೂ ನಿಷೇಧ: ಸುಮಾರು 1850 ಘನಮೀಟರ್ ನೀರು ಭರ್ತಿಯಾಗುವ ಸಾಮರ್ಥ್ಯವನ್ನ ಈ ಕೆರೆ ಹೊಂದಿದೆ. ಕೆರೆಯಲ್ಲಿ ನೀರು ನಿಲ್ಲುತ್ತಿದ್ದಂತೆ ಸುತ್ತಮುತ್ತಲ ಕೊಳವೆ ಬಾವಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನೀರಿಲ್ಲದೆ ಬತ್ತಿದ ಕೊಳವೆ ಬಾವಿಗಳಲ್ಲಿ ಸಹ ಈಗ ಭರಪೂರ ನೀರು ಬರುತ್ತಿದೆ. ಇತ್ತ ಗ್ರಾಮಸ್ಥರಿಗೆ ಸಹ ಕೆರೆಯ ನೀರು ಉಪಯೋಗಕ್ಕೆ ಸಿಗುತ್ತಿದೆ. ಸದ್ಯ ನೀರು ಸ್ವಚ್ಛವಾಗಿಡಲು ಕೆರೆಯಲ್ಲಿ ಜಾನುವಾರುಗಳಿಗೆ ಮೈತೊಳೆಯುವುದಾಗಲಿ ನೀರು ಕುಡಿಸುವುದಕ್ಕಾಗಲಿ ನಿಷೇಧಿಸಲಾಗಿದೆ. ಇತ್ತ ಗ್ರಾಮಸ್ಥರು ಬಟ್ಟೆ ತೊಳೆಯುವುದು ಸೇರಿದಂತೆ ಇತರ ಕಾರ್ಯಗಳಿಗೆ ಸಹ ನಿಷೇಧ ಮಾಡಲಾಗಿದೆ.

ರೈತರ ಬದುಕು ಹಸನಾಗಿದೆ : ಅವನತಿಯ ಅಂಚಿನಲ್ಲಿದ್ದ ಕೆರೆಗೆ ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಗಳು ಮತ್ತು ನರೇಗಾ ಯೋಜನೆ ಜೀವಕಳೆ ತಂದಿದೆ. ಕೆರೆಯ ಸುತ್ತ ವಾಯುವಿಹಾರಕ್ಕೆ ಪಾದಚಾರಿ ಮಾರ್ಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನ ಪ್ರಸ್ತುತ ಮಳೆಗಾಲದಲ್ಲಿ ಗ್ರಾಮ ಪಂಚಾಯತ್​ ಆಯೋಜನೆ ಮಾಡಿದೆ. ಇನ್ನು ಗ್ರಾಮದ ಯುವಕರಿಗಾಗಿ ಕೆರೆಯನ್ನು ಸಂಪೂರ್ಣ ಈಜುಗೊಳ ಮಾಡುವ ಉದ್ದೇಶ ಸಹ ಗ್ರಾಮ ಪಂಚಾಯತಿಗೆ ಇದೆ. ಕಬ್ಬೂರು ಗ್ರಾಮ ಪಂಚಾಯತ್​ನ ಈ ಕಾರ್ಯ ಅಕ್ಕಪಕ್ಕದ ಗ್ರಾಮಸ್ಥರ ಮನಗೆದ್ದಿದೆ.

ಎಲ್ಲಾ ಇಲಾಖೆಯಿಂದಲೂ ಕೂಡಾ ನಮಗೆ ಸಹಾಯವಾಗಿದೆ: ಪಂಚಾಯತ್​ನಿಂದ ಕೆರೆಯ ಹೂಳೆತ್ತಿ ಕೊಟ್ರು. 4400 ಟ್ರ್ಯಾಕ್ಟರ್ ಮಣ್ಣು ಹೋಯಿತು ಹೊರಗೆ. ಅದರಿಂದ ಎಲ್ಲಾ ರೈತರಿಗೆ ಅನುಕೂಲ ಆಯಿತು. ಅಮೃತ್ ಸರೋವರ್ ಎಂಬ ಸ್ಕೀಂ ಬಂತು. ನಂತರ ಹೊಳೆ ನೀರನ್ನು ಇದಕ್ಕೆ ಬಿಟ್ಟಿದ್ದೇವೆ. ನಾವು ಅಕ್ಕಪಕ್ಕದ ಬೋರ್​ವೆಲ್ ಹಾಗೂ ಗ್ರಾಮ ಪಂಚಾಯತ್ ಬೋರ್ವೆಲ್​ನಿಂದ​ ನೀರನ್ನು ಕೆರೆಗೆ ತುಂಬಿಸಿದ್ದೇವೆ. ಸಾವಿರಾರು ಬೋರ್​ವೆಲ್ ಈ ಕೆರೆಗೆ ಸಂಪರ್ಕ​ ಇರುವುದರಿಂದ ನಮ್ಮ ಶಾಲೆಗೆ ಹಾಗೂ ಊರಿಗೆ ಬಹಳ ಅನುಕೂಲವಾಗಿದೆ. ಎಲ್ಲಾ ಇಲಾಖೆಯಿಂದಲೂ ಕೂಡಾ ನಮಗೆ ಸಹಾಯವಾಗಿದೆ. ಅಮೃತ ಸರೋವರ್ ಯೋಜನೆ ಜಾರಿಯಾಗಿ ಕಬ್ಬೂರಿಗೆ ಅನುಕೂಲವಾಗಿದೆ ಎಂದು ಕೆರೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಕರಬಸಪ್ಪ ಅವರು ಹೇಳಿದ್ದಾರೆ.

ಇದನ್ನೂ ಓದಿ : ಮಲ್ಲತ್ತಳ್ಳಿ ಕೆರೆಯಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು : ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.