ಹಾವೇರಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನತಾ ಕರ್ಫ್ಯೂ ಏಳನೇ ದಿನಕ್ಕೆ ಕಾಲಿಟ್ಟಿದೆ. ಜನತಾ ಕರ್ಫ್ಯೂ ಜಾರಿಗೆ ತಂದಾಗಿನಿಂದ ಕುರಿ ಮತ್ತು ಕೋಳಿ ಮಾಂಸದಂಗಡಿಯ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ.
ದಿನಕ್ಕೆ ಕ್ಟಿಂಟಾಲ್‌ಗಟ್ಟಲೆ ಕುರಿ ಮಾಂಸ ಮಾರುತ್ತಿದ್ದ ನಮಗೆ 250 ಗ್ರಾಂ ಮಾಂಸ ಮಾರಾಟ ಮಾಡುವುದು ಕಷ್ಟವಾಗಿದೆ. ನಮ್ಮ ಗ್ರಾಹಕರು ಬರುವುದೇ ಮಧ್ಯಾಹ್ನ 12 ಗಂಟೆಯ ನಂತರ. ಅಂತಹದರಲ್ಲಿ ಸರ್ಕಾರ 12 ಗಂಟೆಗೆ ಅಂಗಡಿ ಬಂದ್ ಮಾಡಲು ಆದೇಶಿಸಿದೆ. ಇನ್ನೇನು ವ್ಯಾಪಾರ ಆರಂಭವಾಯಿತು ಎನ್ನುವಷ್ಟರಲ್ಲಿಯೇ 12 ಗಂಟೆಯಾಗುತ್ತೆ. ಪೊಲೀಸರು ಬಂದು ಅಗಂಡಿ ಮುಚ್ಚಿಸುತ್ತಾರೆ ಎನ್ನುತ್ತಾರೆ ವರ್ತಕರು.
ಇದಲ್ಲದೆ ನಗರದ ಕೋಳಿ ಮಾಂಸದಂಗಡಿಯ ವರ್ತಕರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಜನತಾ ಕರ್ಫ್ಯೂನಿಂದ ಮೀನು ಮಾರಾಟ ಸಹ ಕುಸಿದಿದೆ. ಇದಲ್ಲದೆ ಕೆಲವರು ಕೊರೊನಾಗೆ ಸಸ್ಯಹಾರ ಉತ್ತಮ ಎನ್ನುವ ವದಂತಿ ಹಬ್ಬಿಸುತ್ತಿದ್ದಾರೆ. ಇದರಿಂದಾಗಿ ಸಹ ತಮ್ಮ ವ್ಯಾಪಾರ ಕಡಿಮೆಯಾಗಿದೆ. ಸರ್ಕಾರ ತಮ್ಮ ನೆರವಿಗೆ ಬರಬೇಕು ಎನ್ನುತ್ತಿದ್ದಾರೆ ಕುರಿ-ಕೋಳಿ ಮಾಂಸದಂಗಡಿ ವರ್ತಕರು.
ಓದಿ :ಪಾಠ ಕಲಿಸಿದ ಆಕ್ಸಿಜನ್ ದುರಂತ: ಈಗಲಾದರೂ ಬದಲಾಗಬೇಕಿದೆ ಆಸ್ಪತ್ರೆ ಅವ್ಯವಸ್ಥೆ!