ಹಾವೇರಿ: ಭಾರತ ಲಾಕ್ಡೌನ್ ಹಿನ್ನೆಲೆ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಉಪಹಾರ, ಊಟ ವಿತರಿಸುವಂತೆ ಆದೇಶಿಸಿತ್ತು.
ಆದರೆ ಸ್ಥಳೀಯ ಜನರಿಂದ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಊಟ ಮತ್ತು ಉಪಹಾರ ವಿತರಣೆಗೆ ಹಣ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಉಪಹಾರಕ್ಕೆ 5 ರೂ. ಮತ್ತು ಊಟಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ.