ರಾಣೆಬೆನ್ನೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು Rapid antigen (ರ್ಯಾಪಿಡ್ ಆ್ಯಂಟಿಜೆನ್) ಪರೀಕ್ಷೆ ಮೂಲಕ ಕೊರೊನಾ ವೈರಸ್ ಪತ್ತೆ ಹಚ್ಚುವ ಪರೀಕ್ಷೆಗೆ ಅಧಿಕಾರಿಗಳು ಚಾಲನೆ ನೀಡಿದರು.
ರಾಜ್ಯಾದ್ಯಂತ ಕೊರೊನಾ ವೈರಸ್ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕು ಪತ್ತೆಯ ಪರೀಕ್ಷೆ ನಡೆಸಲು ವಿಳಂಬವಾಗುತ್ತಿದೆ. ಇದನ್ನು ಸರಿಪಡಿಸಲು ಕರ್ನಾಟಕ ಸರ್ಕಾರ Rapid antigen ಪರೀಕ್ಷೆ ಮೂಲಕ ಕೊರೊನಾ ವೈರಸ್ ಸೋಂಕನ್ನು ವೇಗವಾಗಿ ಪತ್ತೆ ಹಚ್ಚಲು ಮುಂದಾಗಿದೆ.
ರಾಣೆಬೆನ್ನೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯ ಸುಮಾರು 15 ಸಿಬ್ಬಂದಿಗಳಿಗೆ ಇಂದು ಈ ಪರೀಕ್ಷೆ ಮಾಡಲಾಯಿತು. ಈ ಸಮಯದಲ್ಲಿ Rapid antigen ಪರೀಕ್ಷೆ ಮಾಡಿಸಿಕೊಂಡ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ.
ಒಟ್ಟಿನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಾಗ ಗಂಟಲು ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗುತಿತ್ತು. ಆ ವರದಿ ಬರಲು ಐದಾರು ದಿನಗಳು ಬೇಕಿತ್ತು. ಈಗ Rapid Antigen ಪರೀಕ್ಷೆ ಮೂಲಕ ಕೇವಲ ಒಂದು ಗಂಟೆಯಲ್ಲಿ ಕೊರೊನಾ ಪತ್ತೆ ಹಚ್ಚಬಹುದಾಗಿದೆ.