ರಾಣೆಬೆನ್ನೂರು: ನಾನು ಆಹ್ವಾನ ಇಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಹ ವ್ಯಕ್ತಿ ಅಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಾದರೂ ಹೋಗಬೇಕಾದರೆ ಅದಕ್ಕೊಂದು ವ್ಯವಸ್ಥೆ ಇರುತ್ತದೆ. ಕೆಲವರ ತರಹ ಸುಮ್ಮ ಸುಮ್ಮನೆ ಖುಷಿ ಪಡಿಸುವ ರಾಜಕಾರಣಿ ನಾನಲ್ಲ ಎಂದರು.
ಓದಿ: ಕೆಲ ಹೊತ್ತಲ್ಲೇ ಪ್ರವಾಸಿ ಮಂದಿರಕ್ಕೆ ಅಮಿತ್ ಶಾ ಆಗಮನ : ಅತೃಪ್ತರ ದೌಡು
ಪಕ್ಷದ ವಿರುದ್ದ ಯಾರು ಹೇಳಿಕೆ ಕೊಟ್ಟಿದ್ದಾರೆ ಅದನ್ನು ಬಹಿರಂಗ ಪಡಿಸಬೇಕಾಗಿದೆ. ಕೆಲವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ನಾನು ಮಾತ್ರ ಅಭಿವೃದ್ದಿ ಪರ ಹೇಳಿಕೆ ನೀಡುವೆ. ಸಿಎಂ ಯಡಿಯೂರಪ್ಪ ಹತ್ತಿರ ಅಭಿವೃದ್ಧಿಗೆ ಅನುದಾನ ಕೊಡಿ ಅಂತಾ ಕೇಳೊದು ತಪ್ಪಾ? ಎಂಎಲ್ಎಗಳು ಸಹ ಅದನ್ನು ಕೇಳಬಾರದಾ? ಎಂದು ಪ್ರಶ್ನಿಸಿದರು.