ETV Bharat / state

ಅನೈತಿಕ ಸಂಬಂಧ : ಪತ್ನಿ ಕೊಲೆಗೈದ ಪತಿ - ಹಾವೇರಿಯಲ್ಲಿ ಪತ್ನಿಯನ್ನು ಕೊಂದ ಪತಿ

ಇವರು ಮಕ್ಕಳಿದ್ದರೂ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪತಿ ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಪತಿ ಸಹೋದರನ ಜೊತೆ ಸೇರಿ ಪತ್ನಿಯನ್ನ ಕೊಲೆ ಮಾಡಿದ್ದಾರೆ. ಯಾರಿಗೂ ಗೂತ್ತಾಗದಿರಲಿ ಎಂದು ಶವವನ್ನು ಸುಟ್ಟು ಹಾಕಿದ್ದಾರೆ..

Police arrested murder accused
ಕೊಲೆಯ ಆರೋಪಿಗಳ ಬಂಧನ
author img

By

Published : Sep 27, 2021, 10:51 PM IST

ಹಾವೇರಿ : ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿರಾಯ ಬಾಮೈದನ ಜೊತೆಗೂಡಿ ಹೆಂಡತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಹಾವೇರಿ ಎಸ್ಪಿ

ಕೊಲೆಯಾದ ಮಹಿಳೆಯನ್ನು ಕೆರಿಕೊಪ್ಪ ಗ್ರಾಮದ ಶಕುಂತಲಾ (35) ಎಂದು ಗುರುತಿಸಲಾಗಿದೆ. ಕೆರಿಕೊಪ್ಪ ಹನುಮಂತಪ್ಪ ಕೊಲೆಗೈದ ಪತಿಯಾಗಿದ್ದಾನೆ. ಕಳೆದ 15 ವರ್ಷಗಳ ಹಿಂದೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ಶಕುಂತಲಾಳನ್ನು ಕೆರಿಕೊಪ್ಪ ಹನುಮಂತಪ್ಪ ಎಂಬುವರು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಶಕುಂತಲಾ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪತಿ ಆರೋಪಿಸಿದ್ದಾರೆ.

ಇದರಿಂದ ಬೇಸತ್ತ ಪತಿ ಹನುಮಂತಪ್ಪ, ಶಕುಂತಲಾ ಸಹೋದರ ಬಸವರಾಜ ಎಂಬುವರ ಜೊತೆ ಸೇರಿ ಕೊಲೆ ಮಾಡಿದ್ದಾರೆ. ಯಾರಿಗೂ ಗೂತ್ತಾಗದಿರಲಿ ಎಂದು ಶವವನ್ನು ಸುಟ್ಟು ಹಾಕಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಗುತ್ತಲ ಪೊಲೀಸರು, ಹನುಮಂತಪ್ಪ, ಬಸವರಾಜು ಸೇರಿ ಮಂಜುನಾಥ್,ಮಂಜಪ್ಪ ನಾಗಪ್ಪ ಮತ್ತು ಕೆಂಚಪ್ಪ ಎಂಬ ಆರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕೊಲೆಗೆ ಬಳಸಿದ್ದ ಆಯುಧ ಮತ್ತು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ.. ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.