ETV Bharat / state

ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆ.. ಆತಂಕದಲ್ಲಿ ಗ್ರಾಮಸ್ಥರು - ಕುಮದ್ವತಿ ನದಿ ಹಾವೇರಿ ಜಿಲ್ಲೆ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬಡಸಂಗಾಪುರ ಗ್ರಾಮದ ಸಮೀಪ ಹರಿವ ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆಯಾಗಿದೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಆತಂಕಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೊಸಳೆಯನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

huge-crocodile-spotted-in-kumadwati-river-the-villagers-are-in-anxiety
ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆ , ಆತಂಕದಲ್ಲಿ ಗ್ರಾಮಸ್ಥರು
author img

By

Published : Mar 14, 2022, 10:37 PM IST

ಹಾವೇರಿ : ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬಡಸಂಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಇವರ ಆತಂಕಕ್ಕೆ ಕಾರಣ ಗ್ರಾಮದ ಸಮೀಪ ಹರಿದುಹೋಗಿರುವ ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆಯಾಗಿರುವುದು.

ಈ ಮೊಸಳೆಯಿಂದಾಗಿ ಬಡಸಂಗಾಪುರ, ಕುಡುಪಲಿ, ಯಡಗೋಡ, ಹಿರೇಮಾದಾಪುರ ಹಾಗೂ ಸಣ್ಣಗುಬ್ಬಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೊಸಳೆ ಕಾಣಿಸಿಕೊಂಡು 40 ದಿನಗಳಾಗಿದ್ದು, ಅರಣ್ಯ ಇಲಾಖೆ ಎಚ್ಚರಿಕೆ ಫಲಕ ಹಾಕಿದ್ದು ಬಿಟ್ಟರೆ ಬೇರೇನು ಮಾಡಿಲ್ಲಾ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.

ಮೊಸಳೆಯ ಕಾರಣ ನದಿ ತಟದ ಜಮೀನಿಗೆ ಬರಲು ಸಹ ರೈತರು ಹೆದರುತ್ತಿದ್ದಾರೆ. ದನಕರುಗಳ ಮೈತೊಳೆಯಲು, ನೀರು ಕುಡಿಸಲು ರೈತರು ಭಯಪಡುತ್ತಿದ್ದಾರೆ. ಹೆಣ್ಮಕ್ಕಳು ಬಟ್ಟೆ ತೊಳೆಯಲು ನದಿಗೆ ಬರುತ್ತಿಲ್ಲ.

ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆ , ಆತಂಕದಲ್ಲಿ ಗ್ರಾಮಸ್ಥರು

ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿಯುವುದಾಗಿ ಭರವಸೆ ನೀಡಿದ್ದರು. ದಾಂಡೇಲಿಯಿಂದ ನುರಿತ ತಜ್ಞರನ್ನ ಕರೆಸುವುದಾಗಿ ತಿಳಿಸಿದ್ದು, 40 ದಿನಗಳಾದರೂ ಯಾರು ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮೊಸಳೆ ಬಾಂದಾರದ ಸಮೀಪವೇ ಕಾಣಿಸಿಕೊಳ್ಳುತ್ತಿದ್ದು, ಈ ಮಾರ್ಗವಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜ್‌ಗಳಿಗೆ ತೆರಳಲು ಹೆದರುತ್ತಿದ್ದಾರೆ. ಗ್ರಾಮಸ್ಥರು ಮೊಸಳೆಯಿಂದ ಸಾಕಷ್ಟು ಆತಂಕಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಮೊಸಳೆಯನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

ಓದಿ :'ಯೋಗಿ ಸರ್ಕಾರ್ 2.0' ಕ್ಯಾಬಿನೆಟ್​​ನಲ್ಲಿ 50 ಸಚಿವರು, ಮೂವರು ಉಪ ಮುಖ್ಯಮಂತ್ರಿಗಳು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.