ಹಾವೇರಿ: ಕಳೆದ 2019ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಸಂಪೂರ್ಣ ಮನೆ ನೆಲಸಮ ಆಗಿದ್ರೂ ಈವರೆಗೆ ಪರಿಹಾರ ದೊರೆತಿಲ್ಲ.
ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಪಾರವ್ವ ಮಲ್ಲೂರ ಎಂಬುವರ ಮನೆ ಮಳೆಗೆ ಸಂಪೂರ್ಣ ಬಿದ್ದಿದೆ. ಮನೆ ಹಾನಿಯಾಗಿರೋ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತ್ನಿಂದ ಹಿಡಿದು ತಾಲೂಕು ಕಚೇರಿವರೆಗೆ ಅರ್ಜಿ ಸಲ್ಲಿಸಿದ್ರೂ ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ.
ಆದಷ್ಟು ಬೇಗ ಅಧಿಕಾರಿಗಳು ಹಾನಿಗೊಳಗಾದ ಮನೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ವೃದ್ಧೆ ಪಾರವ್ವ ಒತ್ತಾಯಿಸಿದ್ದಾರೆ.