ಹಾವೇರಿ: ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಡಿಜಿಸಿಐ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧದ ಹೋರಾಟ ದೊಡ್ಡ ಮೈಲಿಗಲ್ಲಾಗಿದೆ. ಸರ್ಕಾರ ವ್ಯವಸ್ಥಿತವಾಗಿ ಕೋವಿಡ್ ವ್ಯಾಕ್ಸಿನ್ ನೀಡುವ ತೀರ್ಮಾನ ಮಾಡಿದೆ. ಮೊದಲು ಕೊರೊನಾ ವಾರಿಯರ್ಸ್‌ಗೆ, ನಂತರ ಪೌರ ಕಾರ್ಮಿಕರಿಗೆ ತದನಂತರ 50 ವರ್ಷ ದಾಟಿದವರಿಗೆ ನೀಡಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವೆಯೇ ಪೈಪೋಟಿಯಿದೆ: ಬಸವರಾಜ್ ಬೊಮ್ಮಾಯಿ
ಕೋವಿಡ್ ಲಸಿಕೆಗಳ ಬಗ್ಗೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಖಿಲೇಶ್ ಯಾದವ್ಗೆ ಬುದ್ಧಿಬ್ರಮಣೆಯಾಗಿದೆ, ಇಲ್ಲವೇ ಅವರು ದಿವಾಳಿಯಾಗಿದ್ದಾರೆ ಎಂದರು.