ಹಾವೇರಿ : ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ರವಿವಾರ ಲಾಕ್ಡೌನ್ ಮಾಡಲಾಗುವುದು ಎಂದು ಎಸ್ಪಿ ಕೆ.ಜಿ. ದೇವರಾಜ್ ತಿಳಿಸಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಸೇವೆ, ಗೂಡ್ಸ್ ವಾಹನಗಳ ಓಡಾಟ ಎಂದಿನಂತೆ ನಡೆಯಲಿವೆ ಎಂದು ಹೇಳಿದರು.
ಸಾರ್ವಜನಿಕರು ಅನವಶ್ಯಕವಾಗಿ ಮನೆ ಬಿಟ್ಟು ಬರದಂತೆ ಮನವಿ ಮಾಡಿದರು. ಶನಿವಾರ ರಾತ್ರಿ ಎಂಟು ಗಂಟೆಯಿಂದ ಕರ್ಫ್ಯೂ ಆರಂಭವಾಗಲಿದ್ದು ಸೋಮವಾರ ಮುಂಜಾನೆಯವರೆಗೆ ಮುಂದುವರೆಯಲಿದೆ. ಅನವಶ್ಯಕವಾಗಿ ಓಡಾಟ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.