ETV Bharat / state

ಪುನುಗು ಬೆಕ್ಕಿನ ಮರಿಗಳನ್ನ ಕಂಡು ಚಿರತೆ ಎಂದು ಬೆದರಿದ ಜನ! - people fears about civet cats news

ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕುಸನೂರು ಗ್ರಾಮದಲ್ಲಿ ಪುನುಗು ಬೆಕ್ಕಿನ ಮರಿಗಳನ್ನು ಕಂಡು ಜನ ಚಿರತೆ ಮರಿಗಳೆಂದು ಭಾವಿಸಿ ಭಯಭೀತರಾದ ಘಟನೆ ನಡೆದಿದೆ.

civet cat
ಪುನುಗು ಬೆಕ್ಕು
author img

By

Published : Dec 28, 2020, 2:27 PM IST

ಹಾವೇರಿ: ಪುನುಗು ಬೆಕ್ಕಿನ ಮರಿಗಳನ್ನ ಚಿರತೆ ಮರಿಗಳೆಂದು ತಿಳಿದು ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕುಸನೂರು ಗ್ರಾಮದಲ್ಲಿ ನಡೆದಿದೆ.

civet cat
ಪುನುಗು ಬೆಕ್ಕು

ಗ್ರಾಮದ ರೈತರೊಬ್ಬರ ಜಮೀನಿನ ಮೆಕ್ಕೆಜೋಳದ ರಾಶಿಯಲ್ಲಿ ಈ ಮರಿಗಳು ಕಂಡುಬಂದಿವೆ. ರಾತ್ರಿ ವೇಳೆ ಇವುಗಳನ್ನು ಕಂಡ ಸ್ಥಳೀಯರು, ಚಿರತೆ ಮರಿಗಳಿರಬಹುದೆಂದು ಭಯಭೀತರಾಗಿದ್ದಾರೆ. ವಿಷಯ ತಿಳಿದ ಕೆಲವರು ಅರಣ್ಯಾಧಿಕಾರಿಗಳು ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಾನಗಲ್ ಅರಣ್ಯಾಧಿಕಾರಿ ಪರಮೇಶಪ್ಪ ಪೇಲವರ ಈ ಮರಿಗಳನ್ನ ಪರೀಕ್ಷೆ ನಡೆಸಿದ್ದಾರೆ. ಇವು ಚಿರತೆಯ ಮರಿಗಳಲ್ಲ ಪುನುಗು ಬೆಕ್ಕಿನ ಮರಿಗಳು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ನಂತರ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಚಿರತೆ ಮರಿಗಳೆಂದು ಆತಂಕಪಟ್ಟಿದ್ದ ಕುಸನೂರು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.