ಹಾವೇರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಸಂಜೆ ನಾಪತ್ತೆಯಾಗಿದ್ದ ನವಜಾತ ಶಿಶು ಬಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಶನಿವಾರ ಸಂಜೆ ಹಾವೇರಿ ಜಿಲ್ಲಾಸ್ಪತ್ರೆಯಿಂದ ಸಂಜೆ ಆರು ಗಂಟೆ ಹೊತ್ತಿಗೆ ಹೆಣ್ಣುಮಗು ಕಳ್ಳತನವಾಗಿತ್ತು. ನರ್ಸ್ ವೇಷದಲ್ಲಿ ಬಂದಿದ್ದ ಮಹಿಳೆಯೊಬ್ಬಳು ಅಜ್ಜಿಯ ಕೈಯಲ್ಲಿದ್ದ ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ತೋರಿಸುವ ನೆಪದಲ್ಲಿ ಮಹಿಳೆಯು ಮಗುವನ್ನು ಅಪಹರಿಸಿಕೊಂಡು ನಾಪತ್ತೆಯಾಗಿದ್ದಳು.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎಂಬವರಿಗೆ ಸೇರಿದ ಹೆಣ್ಣು ಮಗುವನ್ನು ಅಜ್ಜಿಯಿಂದ ಯಮಾರಿಸಿ ಅಪಹರಿಸಲಾಗಿತ್ತು. ಈ ಬಗ್ಗೆ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಮಹಿಳಾ ಠಾಣೆಯ ಪೊಲೀಸರು ಮಗುವಿನ ಪತ್ತೆಗೆ ತೀವ್ರ ಶೋಧ ನಡೆಸಿದ್ದರು. ಜಿಲ್ಲಾಸ್ಪತ್ರೆಯ ಸಿಸಿಟಿವಿ ದ್ಯಶ್ಯಾವಳಿಗಳು, ಮಹಿಳೆಯ ಚಹರೆ ತಿಳಿದು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಮಗು ದಿಢೀರ್ ಪತ್ತೆಯಾಗಿದೆ. ನವಜಾತ್ ಶಿಶುವನ್ನು ಕದ್ದ ಮಹಿಳೆಯೇ ಅದನ್ನು ಹಿಂದಿರುಗಿಸಿದ್ದಾಳೆ.
ಹಾವೇರಿಯ ನಾಗೇಂದ್ರನಮಟ್ಟಿಯ ಮಹಿಳೆಯು ಮಗು ಕಳ್ಳತನ ಮಾಡಿರುವ ವಿಷಯವನ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಯ್ಬಿದ್ದಾಳೆ. ತನಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲಾ. ಈ ಮಗು ನೋಡಲು ಅಂದವಾಗಿತ್ತು. ಅದಕ್ಕಾಗಿ ಕಳ್ಳತನ ಮಾಡಿದೆ. ರಾತ್ರಿ ಮಗು ಅಳುತ್ತಿರುವುದನ್ನ ನೋಡಿ ಜಿಲ್ಲಾಸ್ಪತ್ರೆಗೆ ತರುವ ಮನಸ್ಸಾದರೂ ಪೊಲೀಸರ ಭಯದಿಂದ ತರಲಿಲ್ಲಾ. ಮಗುವಿನ ರೋದನೆ ತಾಳಲಾರದೆ ಅದನ್ನು ತಂದು ತಾಯಿಗೆ ಒಪ್ಪಿಸುತ್ತಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಮಗುವನ್ನ ಕಳೆದುಕೊಂಡು ಆತಂಕದಲ್ಲಿದ್ದ ಪೋಷಕರು ಇದೀಗ ನಿಟ್ಟಿಸಿರು ಬಿಡುವಂತಾಗಿದೆ.
ಇದನ್ನೂ ಓದಿ : ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ: ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ ಕಳ್ಳರ ಬಂಧನ
ಒಡಿಶಾ ಮೂಲದ ಮೂವರ ಕಳ್ಳರ ಬಂಧನ: ಬೆಂಗಳೂರಿನ ಉದ್ಯಮಿ ಮನೆಯಲ್ಲಿ ಹಣ ದೋಚಿದ್ದ ಒಡಿಶಾ ಮೂಲದ ಮೂವರು ಆರೋಪಿಗಳನ್ನು ಕೋರಮಂಗಲ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪ್ರಫುಲ್ಲಾ ಮಲ್ಲಿಕ್, ಭಕ್ತ ಹರಿ ಮಲ್ಲಿಕ್ ಹಾಗೂ ನಬೀನ್ ಸೊನಾರಿ ಬಂಧಿತ ಆರೋಪಿಗಳು. ಒಡಿಶಾ ಭಾಗದ ಕುಖ್ಯಾತ ದರೋಡೆಕೋರರ ಸಹೋದರರಿಬ್ಬರ ಹಿನ್ನೆಲೆಯಿಂದ ಪ್ರೇರೇಪಿತರಾಗಿದ್ದ ಆರೋಪಿಗಳು, ಅದೇ ಮಾದರಿ ತಾವೂ ಸಹ ದರೋಡೆ ಮಾಡಿ ದಿಢೀರ್ ಶ್ರೀಮಂತರಾಗುವ ಕನಸು ಕಂಡಿದ್ದರು.
ಅದರಂತೆ ಕೋರಮಂಗಲದ 3ನೇ ಬ್ಲಾಕ್‌ನ ಉದ್ಯಮಿಯೊಬ್ಬರ ಕುಟುಂಬ ಅನ್ಯ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದ ಸಮಯ ಬಳಸಿಕೊಂಡು ಮನೆಗೆ ಆರೋಪಿಗಳು ನುಗ್ಗಿದ್ದರು. ಸೆಕ್ಯುರಿಟಿ ಗಾರ್ಡ್, ಸಿಸಿಟಿವಿ ಕ್ಯಾಮರಾಗಳಿಲ್ಲದ್ದರಿಂದ ಮನೆಯಲ್ಲಿದ್ದ ಡೈಮೆಂಡ್ ಚಿನ್ನಾಭರಣ ಬೆಳ್ಳಿ ನಾಣ್ಯಗಳು 3 ಲಕ್ಷ ಮೌಲ್ಯದ ಒಮೇಗಾ ವಾಚ್, ಲ್ಯಾಪ್ ಟ್ಯಾಪ್ ಕ್ಯಾಮರಾ ಹಾಗೂ ಟ್ಯಾಬ್ ದೋಚಿ ಪರಾರಿಯಾಗಿದ್ದರು. ಕದ್ದ ಚಿನ್ನಾಭರಣ ಮಾರಾಟ ಮಾಡಿ ಒಡಿಶಾದಲ್ಲಿ ಭವ್ಯ ಬಂಗಲೆ ನಿರ್ಮಾಣ ಕಾರ್ಯ ಆರಂಭಿಸಿದ್ದರು.
ಇದನ್ನೂ ಓದಿ : ಗರ್ಭ ಧರಿಸಿದ ಜಿಪ್ಸಿಗೆ ರಕ್ತ ನೀಡಿದ ಜಿಮ್ಮಿ.. ಪ್ರಾಣಿಪ್ರೇಮ ಮೆರೆದ ಶ್ವಾನದ ಮಾಲೀಕ